Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕುಮಾರಸ್ವಾಮಿ ಮುಂಬೈ ಹೋದ ಬೆನ್ನಲ್ಲೇ ಶುರುವಾಯ್ತಾ ಸಿಎಂ ಟೆನ್ಶನ್..!

01:30 PM Oct 31, 2023 IST | suddionenews
Advertisement

 

Advertisement

ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೂ ಸರ್ಕಾರದ ಬಗ್ಗೆ ಕೊಂಚ ಭಯವೂ ಇದ್ದಂತೆ ಇದೆ. ಆಪರೇಷನ್ ಕಮಲಕ್ಕೆ ಸರ್ಕಾರವೆಲ್ಲಿ ನಡುಗಿ ಬಿಡುತ್ತದೋ ಎಂಬ ಆತಂಕ. ಮೊದಲೇ ಜೆಡಿಎಸ್, ಬಿಜೆಪಿ ನಾಯಕರು ಆಗಾಗ ಸರ್ಕಾರ ಉರುಳುವ ಮಾತನ್ನೇ ಆಡುತ್ತಿದ್ದಾರೆ. ಈಗಾಗಲೇ ಸರ್ಕಾರದ ಕೆಲ ಶಾಸಕರಿಗೆ ಬಿಜೆಪಿಗರಿಂದ ಕರೆ ಕೂಡ ಬಂದಿದೆ ಎನ್ನಲಾಗಿದೆ. ಇದರ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಂಬೈ ಪ್ರವಾಸ ಬೆಳೆಸಿದ್ದಾರೆ.

ಕುಮಾರಸ್ವಾಮಿ ಅವರು ಮುಂಬೈಗೆ ಹೋದ ಕೂಡಲೇ ಇತ್ತ ಸಿಎಂ ಸಿದ್ದರಾಮಯ್ಯ ಅವರು ಟೆನ್ಶನ್ ಆಗಿದ್ದಾರೆ ಎನ್ನಲಾಗುತ್ತಿದೆ. ಯಾಕಂದ್ರೆ ಆಪರೇಷನ್ ಕಮಲಕ್ಕೆ ನಮ್ಮ ಶಾಸಕರು ಸಿಲುಕಿ ಬಿಟ್ಟರೆ ಎಂಬ ಭಯ. ಕುಮಾರಸ್ವಾಮಿ ಅವರ ಹಿಂದೆ ಯಾರಾದರೂ ಮುಂಬೈ ಪ್ರವಾಸಕ್ಕೆ ಹೋಗುತ್ತಾರಾ ಎಂಬುದರ ಮೇಲೆ‌ನಿಗಾ ವಹಿಸಿದ್ದಾರಂತೆ.

Advertisement

ಕಳೆದ ಬಾರಿ ಸಮ್ಮಿಶ್ರ ಸರ್ಕಾರವನ್ನು ಇದೇ ಆಪರೇಷನ್ ಕಮಲದ ಮೂಲಕ ಕೆಡವಲಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಆರು ತಿಂಗಳಷ್ಟೇ ಸಿಎಂ ಹುದ್ದೆಯಲ್ಲಿ ಇದ್ದರು. ಹೀಗಾಗಿ ಈ ಬಾರಿಯೂ ಸರ್ಕಾರ ಕೆಡವಲು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಸಮ್ಮಿಶ್ರ ಸರ್ಕಾರ ಕೆಡುವುದು ಅಷ್ಟು ಸುಲಭವಾಗಿಲ್ಲ. ಬಿಜೆಪಿ ಜೆಡಿಎಸ್ ಎರಡು ಪಕ್ಷದ ಶಾಸಕರು ಸೇರಿದರು 90 ದಾಟಲ್ಲ. ಕಾಂಗ್ರೆಸ್ 135 ಸ್ಥಾನಗಳಿಂದ ಬಹುಮತ ಪಡೆದು ಗೆದ್ದಿದೆ.

Advertisement
Tags :
bengaluruChief Minister SiddaramaiahCMfeaturedFormer Chief Minister HD kumaraswamyKumaraswamyMumbaisuddionetensionಎಚ್ ಡಿ ಕುಮಾರ ಸ್ವಾಮಿಕುಮಾರಸ್ವಾಮಿಟೆನ್ಶನ್ಬೆಂಗಳೂರುಮಾಜಿ ಸಿಎಂ ಸಿದ್ದರಾಮಯ್ಯಮುಂಬೈಸಿಎಂಸುದ್ದಿಒನ್
Advertisement
Next Article