For the best experience, open
https://m.suddione.com
on your mobile browser.
Advertisement

ಅನರ್ಹರ ಬಿಪಿಎಲ್ ಕಾರ್ಡು ರದ್ದತಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

03:48 PM Jul 08, 2024 IST | suddionenews
ಅನರ್ಹರ ಬಿಪಿಎಲ್ ಕಾರ್ಡು ರದ್ದತಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Advertisement

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ಅಕ್ಕಿ ಸಿಗಲಿ ಎಂಬ ಕಾರಣಕ್ಕೆ ಬಿಪಿಎಲ್ ಕಾರ್ಡು ಮಾಡಿಸಲಾಗಿದೆ. ಆದರೆ, ಹಲವು ವರ್ಷಗಳಿಂದಾನೂ ಬಡವರಿಗಿಂತ ಅನುಕೂಲಸ್ಥರೆ ಬಿಪಿಎಲ್ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಇದೀಗ ಆ ರೀತಿ ಅನರ್ಹರ ಬಿಪಿಎಲ್ ಕಾರ್ಡನ್ನು ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಲಾಗಿದೆ.

Advertisement
Advertisement

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ್ದು, ರಾಜ್ಯದಲ್ಲಿ ಶೇಕಡ 80 ರಷ್ಟು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ. ನೀತಿ ಆಯೋಗದ ಪ್ರಕಾರ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇಕಡ 5.67ರಷ್ಟು ಇರಬೇಕು. ಆದರೆ ರಾಜ್ಯದಲ್ಲಿ 1.27 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಅನರ್ಹ ಬಿಪಿಎಲ್ ಕಾರ್ಡ್ ರದ್ದು ಪಡಿಸಿ, ಅರ್ಹರಿಗೆ ನೀಡಬೇಕು. ಜನರನ್ನು ಅನಗತ್ಯವಾಗಿ ಅಲೆದಾಡಿಸಬೇಡಿ. ಅವರ ದೂರುಗಳನ್ನು ಆಲಿಸಿ, ಅಗತ್ಯ ಪರಿಹಾರಗಳನ್ನು ಒದಗಿಸಬೇಕು ಎಂದರು.

ರಾಜ್ಯದಲ್ಲಿ ಈ ಬಾರಿ ಬರ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದೇವೆ. ಬರ ನಡುವೆ ರ್ವಹಣೆಗೆ 85 ಕೋಟಿ ವೆಚ್ಚವಾಗಿದ್ದು, ಪಾರದರ್ಶಕವಾಗಿ ಮಾಡಲಾಗಿದೆ‌. 783 ಕೋಟಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಲಭ್ಯವಿದೆ. ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಅವಧಿಯಲ್ಲಿ ಇದುವರೆಗೂ ಶೇಕಡ 7ರಷ್ಟು ಮಳೆಯಾಗಿದೆ. ಈ ಬಾರಿ ಮಳೆ ಹೆಚ್ಚಾಗುವ ಕಾರಣ ಅತಿವೃಷ್ಟಿ ಹೆಚ್ಚಾಗುವ ಗ್ರಾಮಗಳನ್ನು ಗುರುತಿಸಲಾಗಿದೆ. ಮಳೆಯಿಂದಾಗಿ ಪ್ರಾಣಹಾನಿ ತಪ್ಪಿಸುವುದು ಆದ್ಯತೆಯಾಗಿದೆ. 27 ಜಿಲ್ಲೆಗಳು 177 ತಾಲೂಕುಗಳು, 1247 ಗ್ರಾಮ ಪಂಚಾಯತಿಗಳಲ್ಲಿ ಅತಿವೃಷ್ಟಿಗೆ ಹಾನಿಗೊಳಗಾಗುವುದನ್ನು ಗುರುತಿಸಲಾಗಿದೆ. ಪ್ರತಿ ಕಡೆಯಲ್ಲೂ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದಿದ್ದಾರೆ.

Advertisement
Advertisement

Tags :
Advertisement