For the best experience, open
https://m.suddione.com
on your mobile browser.
Advertisement

ಜಾತಿಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ..!

05:46 PM Feb 29, 2024 IST | suddionenews
ಜಾತಿಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ
Advertisement

Advertisement

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಪರ-ವಿರೋಧ ಎದುರಿಸಿದ್ದ ಜಾತಿಗಣತಿ ವರದಿ ಕಡೆಗೂ ಸಲ್ಲಿಕೆಯಾಗಿದೆ. ಈ ಜಾತಿ ಹಣತಿ ವರದಿಗೆ ಬಿಜೆಪಿಗರು ಮಾತ್ರವಲ್ಲ ಕಾಂಗ್ರೆಸ್ ನಲ್ಲೂ ಹಲವರ ವಿರೋಧವಿತ್ತು. ಆ ಎಲ್ಲಾ ವಿವಾದಗಳನ್ನು ದಾಟಿ ಇದೀಗ ಜಾತಿ ಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಾರೆ.

Advertisement

ಶಾಶ್ವತ ಹಿಂದುಳಿದ ಆಯೋಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಜಾತಿ ಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ವಿಧಾನಸೌಧದಲ್ಲಿ ಸಲ್ಲಿಕೆ ಮಾಡಿದ್ದಾರೆ. ಈ ವರದಿಗೆ ಅನೇಕರ ವಿರೋಧವಿತ್ತು. 2014-15ರಲ್ಲಿ ಸಂಗ್ರಹವಾಗಿದ್ದ ಜಾತಿ ಗಣತಿ ಇದಾಗಿದೆ ಎನ್ನಲಾಗಿದೆ. ಹೀಗಾಗಿ ಹೊಸದಾಗಿಯೇ ವರದಿಯನ್ನು ತಯಾರಿಸಿ ಎಂದೇ ಹಲವರು ಅಭಿಪ್ರಾಯ ಪಟ್ಟಿದ್ದರು.

ಇದೀಗ ಈ ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಜಯಪ್ರಕಾಶ್ ಹೆಗ್ಡೆ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಜಾತಿಗಣತಿ ವರದಿಯನ್ನು ಸಲ್ಲಿಕೆ ಮಾಡಿದ್ದೇನೆ. ಇದು 2014-15ರಲ್ಲಿ ಸಂಗ್ರಹ ಮಾಡಿದ್ದೆವು. ಸಿಎಂ ಮುಂದಿನ ಸಂಪುಟ ಸಭೆಯಲ್ಲಿ ವರದಿಯನ್ನು ಇಡುವುದಾಗಿ ಹೇಳಿದ್ದಾರೆ. ನಾವೂ ವರದಿಯನ್ನು ಸರ್ಕಾರಕ್ಕೆ ನೀಡಬೇಕಾಗಿತ್ತು. ನೀಡಿದ್ದೇವೆ. ಮುಂದಿನ ಬೆಳವಣಿಗೆ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ. ಸಂಪೂರ್ಣ ವರದಿ ನೋಡದೆ ಅವೈಜ್ಞಾನಿಕ ಎಂಬುದು ಸರಿಯಲ್ಲ. ಈ ವರದಿಯಲ್ಲಿ ಎಲ್ಲಾ ಸದಸ್ಯರ ಸಹಿಯೂ ಇದೆ. ಇದು ಕಾಂತರಾಜು ವರದಿಗೆ ಉತ್ತರ ನೀಡುವ ವರದಿಯಾಗಿದೆ ಎಂದಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, ಇದು ಜಾತಿಗಣತಿ ವರದಿ ಅಲ್ಲ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿ. ಈ ವರದಿಗೆ ಯಾರದ್ದು ವಿರೋಧವಿಲ್ಲ. ಈಗ ವರದಿ ಸ್ವೀಕಾರ ಮಾಡುತ್ತೀವಿ. ಅದರಲ್ಲಿ ಏನು ಮಾಹಿತಿ ಇದೆ ಗೊತ್ತಿಲ್ಲ ಎಂದಿದ್ದಾರೆ.

Tags :
Advertisement