For the best experience, open
https://m.suddione.com
on your mobile browser.
Advertisement

ಸಿಎಂ ಸಿದ್ದರಾಮಯ್ಯ ಅವರಿಗೆ 'ಪತ್ರಿಕಾ ವಿತರಕರ ಬಂಧು' ಬಿರುದು

05:22 PM Sep 14, 2024 IST | suddionenews
ಸಿಎಂ ಸಿದ್ದರಾಮಯ್ಯ ಅವರಿಗೆ  ಪತ್ರಿಕಾ ವಿತರಕರ ಬಂಧು  ಬಿರುದು
Advertisement

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿಗೆ, ಪತ್ರಕರ್ತರೊಂದಿಗೆ ಅವರಿಗಿರುವ ನಂಟಿನ ಬಂಧಕ್ಕೆ ಇಂದು ಪತ್ರಕರ್ತ ಮಿತ್ರರು ಸೇರಿ ಅವರಿಗೊಂದು ಸುಂದರವಾದ ಬಿರುದನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ "ಪತ್ರಿಕಾ ವಿತರಕರ ಬಂಧು" ಎನ್ನುವ ಬಿರುದು ನೀಡಿ ಸನ್ಮಾನಿಸಿದ್ದಾರೆ.

Advertisement
Advertisement

ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 08 ರಂದು ಪತ್ರಿಕಾ ವಿತರಕರ ನಾಲ್ಕನೇ ರಾಜ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನದಲ್ಲಿಯೇ ಈ ಬಿರುದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಬೇಕಾಗಿತ್ತು. ಸಮ್ಮೇಳನಕ್ಕೆ ಬರಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಕಾರಣಾಂತರದಿಂದ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳು ಗೈರಾಗಿದ್ದರು. ಹೀಗಾಗಿ ಇಂದು ಕಾವೇರಿ ನಿವಾಸಕ್ಕೇ ಬಂದ ಪತ್ರಕರ್ತರ ಸಂಘದವರು, ಕಾವೇರಿ ನಿವಾಸದಲ್ಲಿಯೇ ಬಿರುದನ್ನು ನೀಡಿ, ಗೌರವಿಸಿದರು.

ಈ ವೇಳೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷರಾದ ಶಂಬುಲಿಂಗ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಕಾಂಗ್ರೆಸ್ ಮುಖಂಡರಾದ ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲ್ ಅವರು ಉಪಸ್ಥಿತರಿದ್ದು ಪತ್ರಿಕಾ ವಿತರಕ ಸಮುದಾಯಕ್ಕೆ ಸರ್ಕರ ನೀಡಿರುವ ನೆರವನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿದರು.

Advertisement
Advertisement

Advertisement
Tags :
Advertisement