ಬಜೆಟ್ ವೇಳೆ ಕೇಂದ್ರ ಸರ್ಕಾರದ ವಿರುದ್ದ ಸಿಎಂ ಗರಂ : ಬಿಜೆಪಿ ನಾಯಕರಿಂದ ವಿರೋಧ
11:41 AM Feb 16, 2024 IST
|
suddionenews
Advertisement
Advertisement
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 15ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಬರುತ್ತಿಲ್ಲ ಎಂಬ ಬೇಸರವಿದೆ. ಜೊತೆಗೆ ಮನವಿಯನ್ನು ಮಾಡಿದರು ಹಣ ರಿಲೀಸ್ ಆಗಿಲ್ಲ ಎಂಬ ಬೇಸರವೂ ಇದೆ. ಇದೀಗ ಬಜೆಟ್ ಮಂಡನೆಯ ವೇಳೆಯೂ ಈ ವಿಚಾರವನ್ನು ತೆಗೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಬಜೆಟ್ ವೇಳೆ ಪುನರುಚ್ಛಾರ ಮಾಡಿದ್ದಾರೆ. ಇದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಸುಳ್ಳು ಹೇಳಬೇಡಿ ಸಿದ್ದರಾಮಯ್ಯ ಅವರೇ ಎಂದು ಬಜೆಟ್ ನಡವೆಯೇ ವಿಪಕ್ಷ ನಾಯಕರು ಗದ್ದಲ ಎಬ್ಬಿಸಿ, ಪ್ರತಿಭಟನೆ ನಡೆಸಿದ್ದಾರೆ.
Advertisement
ಸಿಎಂ ಸಿದ್ದರಾಮಯ್ಯ ಅವರು ಅದನ್ನು ಅಲ್ಲಿಗೆ ಮುಗಿಸಿ ಬಜೆಟ್ ಮುಂದುವರೆಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕರು ದೆಹಲಿಯನ್ನು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಕೋಟಿ ಹಣ ಬರಬೇಕಿದೆ ಎಂಬುದರ ವಿಚಾರವನ್ನು ದಾಖಲೆ ಸಮೇತ ಮಾತನಾಡಿದ್ದರು.
Advertisement
Next Article