ಸಿಎಂ-ಡಿಸಿಎಂ ಬಾಂಧವ್ಯ ಗಟ್ಟಿಯಾಯ್ತ..? : ಯತೀಂದ್ರರ ಮಾತಿಗೆ ಡಿಕೆಶಿ ಕೊಟ್ಟ ರಿಯಾಕ್ಷನ್ ನೋಡಿ
ಬೆಂಗಳೂರು : ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಬಹಳ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಆಗಬೇಕು ಎಂಬ ನಿರೀಕ್ಷೆಯಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್, ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ. ಅದನ್ನ ಯಾರೂ ತಪ್ಪಿಸುವುದಕ್ಕೆ ಆಗಲ್ಲ. ಈಗ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನಿದ್ದೀನಿ. ಅವರು ಮುಖ್ಯಮಂತ್ರಿಯಾಗಿದ್ದಾರೆ. ಇಬ್ವರು ಒಟ್ಟಿಗೆ ಸೇರಿ ಚುನಾವಣೆ ಎದಿರಿಸುತ್ತೀವಿ. ಅವರ ನಾಯಕತ್ವದಲ್ಲಿಯೇ ಚುನಾವಣೆ ನಡೆಯಲಿದೆ.
ಅದರಲ್ಲಿ ಅನುಮಾನವೇನು ಇಲ್ಲ. ಆಸೆ ಪಡುವುದು, ಜನರಲ್ಲಿ ಮನವಿ ಮಾಡುವುದು ನಮಗೆ ಶಕ್ತಿ ಕೊಡಿ ಎಂದು ಕೇಳೆ ಕೇಳುತ್ತೀವಿ. ಇದು ಎಲ್ಲರ ಸ್ವಾಭಾವಿಕ ಧರ್ಮ. ಅದಕ್ಜೆ ಯಾಕೆ ನಾವೂ ಬೇರೆ ಥರ ಟ್ವಿಸ್ಟ್ ಮಾಡಬೇಕು. ಯತೀಂದ್ರ ಬಹಳ ಸೆನ್ಸಿಬಲ್ ನಾಯಕ. ನಾವೂ ಅವರಿಗೆ ಪ್ರೋತ್ಸಾಹ ನೀಡೋಣಾ ಎಂದಿದ್ದಾರೆ.
ಬಿಜೆಪಿ ಅವರು ಅವರ ಪಾರ್ಟಿ ಸರಿ ಮಾಡಿಕೊಳ್ಳಲಿ ಮೊದಲು. ನನ್ಎ ಮಾಹಿತಿ ಗೊತ್ತಿಲ್ಲ. ಗೊತ್ತಿಲ್ಲದೆ ಏನನ್ನು ಮಾತನಾಡುವುದಿಲ್ಲ. ಅದು ರೈಲ್ವೆಗೆ ಸಂಬಂಧಿಸಿರುವುದು. ಸುಮ್ಮ ಸುಮ್ಮನೆ ಬೇಡದೆ ಇರುವ ವಿಚಾರಕ್ಕೆ ಮಾತನಾಡುವುದಿಲ್ಲ ಎಂದು ಹುಬ್ಬಳ್ಳಿ ರೈಲ್ವೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆಂಬುದಕ್ಕೆ ಪ್ರತಿಕ್ರಿಯೆ ನೀಡಿ, ನಾನೇ ಕಣ್ಣಲ್ಲಿ ಆ ಸೋಪುಗಳನ್ನ ನೋಡಿದ್ದೆ. ಅದರಲ್ಲಿ ಒರಿಜಿನಲ್ ಹಾಗೂ ಡೂಪ್ಲಿಕೇಟ್ ಗೊತ್ತಾಗುತ್ತದೆ. ಒಂದು ದಿನ ಅದು ಒಪನ್ ಮಾಡಿದ ಕೂಡಲೆ ಬಣ್ಣ ಬದಲಾಗುತ್ತದೆ. ನಾನು ಮೂರ್ನಾಲ್ಕು ಬಾರಿ ತನಿಖೆ ಮಾಡಿ ಎಂದು ಹೇಳಿದೆ. ಈಗ ಒಳ್ಳೆಯದ್ದಾಗುತ್ತಿದೆ. ಅದು ಯಾರೇ ಆದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.