ತುಂಗಾಭದ್ರಾ ಡ್ಯಾಂ ಬಳಿ ವಿಧಿಸಿದ್ದ 144 ಸೆಕ್ಷನ್ ತೆರವು : ಕನ್ನಯ್ಯ ಅಳವಡಿಸಿದ ಗೇಟನ್ನ ಈಗ ನೀವೂ ನೋಡಬಹುದು..!
ವಿಜಯಪುರ: ಕಳೆದ ಕೆಲವು ದಿನಗಳಿಂದ ತುಂಗಾಭದ್ರಾ ಡ್ಯಾಂ ಬಳಿ 144 ಸೆಕ್ಷನ್ ಅಳವಡಿಸಲಾಗಿತ್ತು. ಡ್ಯಾಂ ಗೇಟ್ ಕಳಚಿದ್ದ ಕಾರಣ, ನೀರಿನ ಅರಿವು ಹೆಚ್ಚಾಗಿತ್ತು. ಹೀಗಾಗಿ ಜನ ಅದನ್ನು ನೋಡಲು ಬಂದು ಅಪಾಯಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದೀಗ ನಿಷೇಧಾಜ್ಞೆಯನ್ನು ತೆರವು ಮಾಡಲಾಗಿದೆ.
ಅದರಲ್ಲೂ ಗೇಟ್ ದುರಸ್ಥಿ ಕಾರ್ಯ ಸಾಗಿದ್ದು ಹೇಗೆ..? ಅಳವಡಿಸಿರುವ ಸ್ಟಾಪ್ ಲಾಗ್ ಹೇಗಿದೆ..? ರಭಸವಾಗಿ ಹರಿಯುತ್ತಿದ್ದ ನೀರು ಕಡಿಮೆಯಾಗಿದ್ದೇಗೆ ಎಂಬೆಲ್ಲಾ ಕುತೂಹಲ ಸಹಜವಾಗಿ ಜನಸಾಮಾನ್ಯರಿಗೆ ಇರುತ್ತದೆ. ಹತ್ತಿರದಿಂದ ನೋಡಬೇಕೆಂಬ ಆಸೆಗೆ ಈಗ ಅವಕಾಶ ಸಿಕ್ಕಿದೆ. ತುಂಗಾಭದ್ರಾ ಡ್ಯಾಂ ವೀಕ್ಷಣೆಗೆ ಅವಕಾಶ ಕೊಡಲಾಗಿದೆ. ಜಲಾಶಯ ನೋಡಬೇಕೆನ್ನುವವರು ವಿಸಿಟ್ ಮಾಡಬಹುದು.
ಇನ್ನು ನಿನ್ನೆಯಿಂದ ತುಂಗಾಭದ್ರೆಗೆ ನೀರು ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ 75 ಟಿಎಂಸಿ ನೀರು ಹೆಚ್ಚಾಗಿತ್ತು. ಇಂದು 76.912 ಟಿಎಂಸಿ ನೀರು ಸಂಗ್ರಹವಾಗಿದೆ. 31,033 ಕ್ಯೂಸೆಕ್ ನೀರು ಒಳಹರಿವು ಸದ್ಯಕ್ಕೆ ಇದೆ. 10,201 ಕ್ಯೂಸೆಕ್ ನೀರು ಹೊರ ಹರಿವು ಇದೆ. ಇನ್ನು ರಾಜ್ಯದಲ್ಲಿ ಬೆಂಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಸದ್ಯ ತುಂಗಾಭದ್ರಾ ಜಲಾಶಯದ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ನೆಮ್ಮದಿಯಾಗಿದೆ. ಯಾಕಂದ್ರೆ ಕ್ರಸ್ಟ್ ಗೇಟ್ ಮುರಿದು ನೀರು ಹೊರಗೆ ಹೋಗುತ್ತಿತ್ತು. ಸುಮಾರು 60 ಟಿಎಂಸಿ ನೀರನ್ನು ಖಾಲಿ ಮಾಡಬೇಕಾಗುತ್ತೆ ಎನ್ನಲಾಗಿತ್ತು. ಇದರಿಂದ ರೈತರಿಗೆ ಆಘಾತವಾಗಿತ್ತು. ಅಷ್ಟೊಂದು ನೀರನ್ನು ಹೊರಗೆ ಬಿಟ್ಟರೆ ಮುಂದೇನು ಗತಿ ಎಂದು. ಆದರೆ ಕನ್ನಯ್ಯ ತಂಡ ಕೂಡ ಅರ್ಧ ನೀರನ್ನಷ್ಟೇ ಹೊರಗೆ ಬಿಟ್ಟಿದೆ. ಸದ್ಯ ಎಲ್ಲವೂ ಸರಿಯಾಗಿದ್ದು, ತುಂಗಾ ಭದ್ರಾ ಜಲಾಶಯದ ಸುತ್ತಮುತ್ತ ಸಹಜ ಸ್ಥಿತಿಗೆ ಬಂದಿದೆ.