Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜೈಲಿಂದ ರಿಲೀಸ್ ಆದ್ಮೇಲೆ ಸಿಟಿ ರವಿ ಸುದ್ದಿಗೋಷ್ಟಿ : ಪೊಲೀಸರ ಬಗ್ಗೆ ಹೇಳಿದ್ದೇನು..?

08:09 PM Dec 20, 2024 IST | suddionenews
Advertisement

ದಾವಣಗೆರೆ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ದರು ಎಂಬ ಕಾರಣದಿಂದ ಬಿಜೆಪಿ ಎಂಎಲ್ಸಿ ಸಿಟಿ ರವಿ ಅರೆಸ್ಟ್ ಆಗಿದ್ದರು. ಬೆಳಗಾವಿ ನ್ಯಾಯಾಲಯ ಜಾಮೀನು ಅರ್ಜಿ ಕ್ಯಾನ್ಸಲ್ ಮಾಡಿ ಬೆಂಗಳೂರು ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಸಿಟಿ ರವಿ ಪರ ವಕೀಲರು ತಕ್ಷಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ಹೈಕೋರ್ಟ್ ನ್ಯಾಯಾಧೀಶರು ಜಾಮೀನು ನೀಡಿದರು. ಜಾಮೀನು ಪಡೆದ ಸಿಟಿ ರವಿ ಅವರು ದಾವಣಗೆರೆಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಜೊತೆಗಿದ್ದರು. ಈ ವೇಳೆ ಸಿಟಿ ರವಿ‌ಮಾತನಾಡಿ, ನಾಲ್ಕು ಜಿಲ್ಲೆ.. ಐವತ್ತಕ್ಕೂ ಹೆಚ್ಚು ಗ್ರಾಮಗಳನ್ನ ಅಲೆದಾಡಿಸಿ.. ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಕೆಲವರ ಸೂಚನೆ ಮೇರೆಗೆ ನಡೆದುಕೊಳ್ಳಲಾಗಿದೆ. ನಮ್ಮ ಪಾರ್ಟಿ, ರಾಜ್ಯಾಧ್ಯಕ್ಷರು, ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ಸೇರಿದಂತೆ ಸಾಮಾನ್ಯ ಕಾರ್ಯಕರ್ತರು ಕೂಡ ನನ್ನ ಜೊತೆಗೆ ನಿಂತರು. ಜಡ್ಜ್ ಮೆಂಟ್ ವಿಚಾರಕ್ಕೆ ಒಂದೇ ಹೇಳೋದು ಸತ್ಯ ಮೇವ ಜಯತೆ ಅನ್ನೋದು. ಇಂದು ಸತ್ಯಕ್ಕೆ ಜಯ ಸಿಕ್ಕಿದೆ. ನೀವೂ ಕೊಟ್ಟಂತ ಹಿಂಸೆ ಮೂವತ್ತು ವರ್ಷಗಳ ಹಿಂದಿನಿಂದ ನೋಡಿದ್ದೀವಿ. ನೀವೂ ಕೊಡುವ ತೊಂದರೆ ಇನ್ನಷ್ಟು ಹೋರಾಟ ಮಾಡುವ ಶಕ್ತಿ ಕೊಡುತ್ತದೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿ, ನಿನ್ನೆಯಿಂದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಈ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನತೆಗೆ ತೋರಿಸಿದ್ದೀರಿ. ಅದಕ್ಕೆ ನಿಮಗೆಲ್ಲ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆದ್ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

Advertisement

Advertisement
Tags :
bengaluruchitradurgact ravinews conferencerelease from jailsuddionesuddione newsಚಿತ್ರದುರ್ಗಜೈಲಿಂದ ರಿಲೀಸ್ಬೆಂಗಳೂರುಸಿಟಿ ರವಿ ಸುದ್ದಿಗೋಷ್ಟಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article