For the best experience, open
https://m.suddione.com
on your mobile browser.
Advertisement

'ಚೌ ಚೌ ಬಾತ್' ಟ್ರೇಲರ್ ರಿಲೀಸ್ : ಹೊಸತನವನ್ನೇ ಬಚ್ಚಿಟ್ಟುಕೊಂಡಿರುವ ಸಿನಿಮಾವಿದು

07:02 PM Jan 25, 2024 IST | suddionenews
 ಚೌ ಚೌ ಬಾತ್  ಟ್ರೇಲರ್ ರಿಲೀಸ್   ಹೊಸತನವನ್ನೇ ಬಚ್ಚಿಟ್ಟುಕೊಂಡಿರುವ ಸಿನಿಮಾವಿದು
Advertisement

ಪ್ರೇಕ್ಷಕರಿಗೆ ಹೊಸತನದ ಸಿನಿಮಾದ ಅಗತ್ಯವಿದೆ. ಹೀಗಾಗಿ ಪ್ರೇಕ್ಷಜರ ನಾಡಿಮಿಡಿತ ಅರಿತ ನಿರ್ದೇಶಕ ಕೇಂಜ ಚೇತನ್ ಕುಮಾರ್ 'ಚೌ ಚೌ ಬಾತ್' ಉಣಬಡಿಸಲು ಸಿದ್ದರಾಗಿದ್ದಾರೆ. ಸದ್ಯ ಇಂದು ಅದರ ಟ್ರೇಲರ್ ಬಿಟ್ಟು ರುಚಿ ತೋರಿಸಿದ್ದಾರೆ. ಟ್ರೇಲರ್ ನೋಡಿದಾಗಲೇ ಹೊಸತನದ ಅನುಭವವಾಗಿದೆ.

Advertisement
Advertisement

Advertisement

ಇಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ನಿರ್ಮಾಪಕ ಸತೀಶ್ ಎಸ್.ಬಿ ಅವರು ತಮ್ಮ ಪತ್ನಿಯೊಂದಿಗೆ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಸಿನಿಮಾ ತಂಡಕ್ಕೆ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ಅವಿನಾಶ್ ಶೆಟ್ಟಿ ಸಪೋರ್ಟ್ ನೀಡಿದ್ದು, ಶುಭ ಹಾರೈಸಿದ್ದಾರೆ.

Advertisement
Advertisement

ಸಿನಿಮಾ ಆರಂಭದಿಂದಾನೂ ಕುತೂಹಲವನ್ನು ಕಾಯ್ದಿರಿಸಿತ್ತು. ಈಗ ಟ್ರೇಲರ್ ಬಿಡುಗಡೆ ಮೂಲಕ ಆ ಕೌತುಕ ಮತ್ತಷ್ಟು ಹೆಚ್ಚಾಗಿದೆ. ಚೌ ಚೌ ಬಾತ್ ಕನ್ನಡದ ಮಟ್ಟಿಗೆ ಅನೇಕ ಮೊದಲುಗಳನ್ನು, ಹೊಸತನವನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ. ಅದು ಕನ್ನಡದ ಮೊಟ್ಟ ಮೊದಲ ಹೈಪರ್ ಲಿಂಕ್ ರಾಮ್‌ ಕಾಮ್‌ ಮಾದರಿಯ ಚಿತ್ರವೆಂಬ ಮಾಹಿತಿಯನ್ನೂ ಕೂಡಾ ನಿರ್ದೇಶಕರು ತೆರೆದಿಟ್ಟಿದ್ದಾರೆ. ಸನಾತನಯ್ ಪಿಕ್ಚರ್ಸ್ ಮತ್ತು ಕಾಮಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ,ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ.

ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿರುವ ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನು ಖುದ್ದು ಕೇಂಜ ಚೇತನ್ ಕುಮಾರ್ ಅವರೇ ನಿಭಾಯಿಸಿದ್ದಾರೆ. ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ `ಚೌ ಚೌ ಬಾತ್’ ಚಿತ್ರ ಮೂಡಿ ಬಂದಿದೆ.

Advertisement
Tags :
Advertisement