For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ತಾಲ್ಲೂಕುವಾರು ಮಾಹಿತಿ...!

03:06 PM Jul 22, 2024 IST | suddionenews
ಚಿತ್ರದುರ್ಗ   ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ   ಇಲ್ಲಿದೆ ತಾಲ್ಲೂಕುವಾರು ಮಾಹಿತಿ
Advertisement

ಚಿತ್ರದುರ್ಗ. ಜುಲೈ.22: ಭಾನುವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 6.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.

Advertisement
Advertisement

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 1.4 ಮಿ.ಮೀ, ಚಿಕ್ಕಜಾಜೂರು 5.8 ಮಿ.ಮೀ, ಬಿ.ದುರ್ಗ 4 ಮಿ.ಮೀ, ಹೆಚ್.ಡಿ.ಪುರ 2.6 ಮಿ.ಮೀ, ತಾಳ್ಯ 2 ಮಿ.ಮೀ ಮಳೆಯಾಗಿದೆ.

Advertisement

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 1.5 ಮಿ.ಮೀ, ರಾಯಾಪುರ 1.5 ಮಿ.ಮೀ ದೇವಸಮುದ್ರದಲ್ಲಿ 1.2 ಮಿ.ಮೀ ಮಳೆಯಾಗಿದೆ.

Advertisement

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 1 ಮಿ.ಮೀ, ನಾಯಕನಹಟ್ಟಿ 2.4ಮಿ.ಮೀ, ತಳಕು 1.2 ಮಿ.ಮೀ ಹಾಗೂ ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 0.8 ಮಿ.ಮೀ ಮಳೆಯಾಗಿದೆ.

Advertisement

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 2 ಮಿ.ಮೀ, ಚಿತ್ರದುರ್ಗ-2ರಲ್ಲಿ 2.4 ಮಿ.ಮೀ, ಐನಹಳ್ಳಿ 3.6 ಮಿ.ಮೀ, ಭರಮಸಾಗರ 4 ಮಿ.ಮೀ, ಸಿರಿಗೆರೆ 4.4 ಮಿ.ಮೀ ಮಳೆಯಾಗಿದೆ.

9 ಮನೆಗಳು ಭಾಗಶಃ ಹಾನಿ: ಭಾನುವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ ಒಟ್ಟು ಭಾಗಶಃ 9 ಮನೆಗಳು ಹಾನಿಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾಗಶಃ 7 ಮನೆಗಳು ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿ ಭಾಗಶಃ 2 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Tags :
Advertisement