Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ : ಮಳೆಗೆ ಜಿಲ್ಲೆಯಾದ್ಯಂತ 80 ಮನೆಗಳು ಹಾನಿ : ಮಳೆ ವರದಿ...!

04:36 PM Oct 18, 2024 IST | suddionenews
Advertisement

ಚಿತ್ರದುರ್ಗ.ಅ.18:  ಗುರುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 11.3 ಮಿ.ಮೀ ಮಳೆಯಾಗಿದೆ.

Advertisement

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 15 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 6.8 ಹಿರಿಯೂರು ತಾಲ್ಲೂಕು 14.2 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 13 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 6.8 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 9.6 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 10.9 ಮಿ.ಮೀ, ನಾಯಕನಹಟ್ಟಿ 24.1 ಮಿ.ಮೀ, ಪರಶುರಾಂಪುರ 15.4 ಮಿ.ಮೀ, ತಳಕು 11.4 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 5.2 ಮಿ.ಮೀ, ಭರಮಸಾಗರ 10.1 ಮಿ.ಮೀ, ಹಿರೇಗುಂಟನೂರು 10.8 ಮಿ.ಮೀ, ತುರುವನೂರು 3.2 ಮಿ.ಮೀ ಮಳೆಯಾಗಿದೆ.

Advertisement

ಹಿರಿಯೂರು ತಾಲ್ಲೂಕಿನ ಹಿರಿಯೂರು 23 ಮಿ.ಮೀ,  ಐಮಂಗಲ 20.7 ಮಿ.ಮೀ, ಧರ್ಮಪುರ 9.3 ಮಿ.ಮೀ, ಜವನಗೊಂಡನಹಳ್ಳಿ 5.5 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 22.2 ಮಿ.ಮೀ, ಬಿ.ದುರ್ಗ 9 ಮಿ.ಮೀ, ರಾಮಗಿರಿ 22 ಮಿ.ಮೀ, ತಾಳ್ಯ 2.5 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 20.3 ಮಿ.ಮೀ, ಮಾಡದಕೆರೆ 2 ಮಿ.ಮೀ, ಮತ್ತೋಡು 0.3 ಮಿ.ಮೀ, ಶ್ರೀರಾಂಪುರ 1 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 8.5 ಮಿ.ಮೀ ಹಾಗೂ ದೇವಸಮುದ್ರದಲ್ಲಿ 10.9 ಮಿ.ಮೀ ಮಳೆಯಾಗಿದೆ.

 

80 ಮನೆಗಳು ಭಾಗಶಃ ಹಾನಿ:  ಗುರುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 80 ಮನೆಗಳು ಭಾಗಶಃ ಹಾನಿಯಾಗಿದ್ದು, 3 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 24 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ 15 ಮನೆಗಳು, ಹೊಳಲ್ಕೆರೆ 14 ಮನೆಗಳು, ಹೊಸದುರ್ಗ 5 ಮನೆಗಳು ಭಾಗಶಃ ಹಾನಿ ಹಾಗೂ 3 ಮನೆಗಳಿಗೆ ನೀರು ನುಗ್ಗಿವೆ. ಹಿರಿಯೂರು ತಾಲ್ಲೂಕಿನಲ್ಲಿ 17 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Advertisement
Tags :
80 houses damage80 ಮನೆಗಳು ಹಾನಿbengaluruchitradurgaRain Reportsuddionesuddione newsಚಿತ್ರದುರ್ಗಬೆಂಗಳೂರುಮಳೆ ವರದಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article