Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಲೋಕಸಭಾ ಚುನಾವಣೆ | ಬಿಜೆಪಿ ಪಕ್ಷದ ಗೆಲುವುಗೆ ಕಾರ್ಯಕರ್ತರು ಶ್ರಮವಹಿಸಿ : ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ

06:44 PM Feb 25, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 25 :  ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು. ಈ ಕೆಲಸವನ್ನು ಪಕ್ಷದ ಮುಖಂಡರು ಕಾರ್ಯಕರ್ತರು ಮಾಡುವುದರ ಮೂಲಕ ಚಿತ್ರದುರ್ಗ ಜಿಲ್ಲೆಯಿಂದಲೇ ಬಿಜೆಪಿ ಪಕ್ಷ ಗೆಲುವಿನ ನಗೆ ಬಿರುವಂತಾಗಬೇಕು ಎಂದು ಕೇಂದ್ರ ಸಚಿವರಾದ ಎ.ನಾರಾಯಣ ಸ್ವಾಮಿ ಕರೆ ನೀಡಿದರು.

Advertisement

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದ ಒಕ್ಕಲಿಗರ ಸಮುದಾಯ ಭವನದ ಕಾಂಪ್ಲೆಕ್ಸನಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ಲೋಕಸಭಾ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದು ಲೋಕಸಭಾ ಚುನಾವಣೆ ಕಾರ್ಯಾಲಯ ಪ್ರಾರಂಭವಾಗುವುದರ ಮೂಲಕ ಚುನಾವಣೆ ಕೆಲಸಗಳು ಇಂದಿನಿಂದ ಅಧಿಕೃತವಾಗಿ ಚಾಲನೆ ನೀಡಿದಂತೆ ಆಗಿದೆ ಇನ್ನು 10 ದಿನಗಳಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾಗಲಿದೆ... ಏಪ್ರಿಲ್ 3ನೇ ಅಥವಾ 4ನೇ ವಾರದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಬಹುದು ಇನ್ನು 60 ರಿಂದ 70 ದಿನ ನಾವೆಲ್ಲ ಸಂಘಟನೆಯಲ್ಲಿ ತೊಡಗಬೇಕಾಗಿದೆ ಎಂದರು.

ಗೃಹ ಅಮಿತ್ ಷಾರವರು ಸೂಚನೆ ನೀಡಿದರೆ ಬೇರೆಯವರ ಬಗ್ಗೆ ಟೀಕೆ ಮಾಡುವುದರ ಬದಲು ನಮ್ಮ ಸಾಧನೆಗಳನ್ನು ತಿಳಿಸಿಕೊಡಿ.. 5 ಲಕ್ಷ ಲೀಡ್‌ವರೆಗೂ 28ಕ್ಕೂ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು.. ನಾವು ಗೆಲುವು ಸಾಧಿಸಬೇಕಾದರೆ ಇಂದಿನ ಚುನಾವಣೆಯಲ್ಲಿ ತೆಗೆದುಕೊಂಡ ಮತಗಳಿಗಿಂತ ಶೇ 10% ಹೆಚ್ಚು ಮಾಡಿಕೊಳ್ಳಬೇಕಾಗಿದೆ. ರಾಮಮಂದಿರ ಕೇವಲ ಮಂದಿರ ಅಲ್ಲ ಅದು ಪ್ರತಿಯೊಬ್ಬ ಹಿಂದೂವಿನ ಆತ್ಮ ಗೌರವ. ನಮ್ಮ ರಾಷ್ಟ್ರೀಯ ನಾಯಕರಾದ ವಿಶ್ವ ನಾಯಕ ನರೇಂದ್ರ ಮೋದಿರವರು, ಅಮಿತ್ ಶಾರವರು, ಜೆ.ಪಿ ನಡ್ದಾರವರು ಈ ಎಲ್ಲಾ ನಾಯಕರು ಕೂಡ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 400 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಿಸುವುದರ ಎನ್‌ಡಿಎ ಗೆಲ್ಲಬೇಕು ಎಂಬ ಅಂಶವನ್ನು ದೇಶದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.. ಆ ನಿಟ್ಟಿನಲ್ಲಿ ಜನರ ಆಶೀರ್ವಾದವನ್ನು ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಇನ್ನು ನೂರು ದಿನ ಸಂಪೂರ್ಣ ಶ್ರಮ ಹಾಕಿ ಬಿಜೆಪಿ ಪಕ್ಷ ಮಾಡಿರುವಂತ ಎಲ್ಲಾ ಕೆಲಸಗಳನ್ನು ಮನೆ ಮನೆಗೆ ಹೋಗಿ ಸಾಮಾನ್ಯ ಜನರಿಗೆ ತಿಳಿಸಬೇಕು ಆ ಮುಖಾಂತರ 3ನೇ ಬಾರಿ ಮತ್ತೊಮ್ಮೆ ಮೋದಿ ಎಂಬ ಅಂಶವನ್ನು ಇಟ್ಟುಕೊಂಡು ಚುನಾವಣೆಯನ್ನು ಗೆಲ್ಲಬೇಕು. ಇಡೀ ದೇಶದಲ್ಲಿ ಒಂದು ರೀತಿಯ ವಿಶೇಷವಾದ ವಾತಾವರಣ ಭಾರತೀಯ ಜನತಾ ಪಾರ್ಟಿ ಪರವಿದೆ. ಈ ದೇಶದ ಬಡವರ ಬಗ್ಗೆ ರೈತರ ಬಗ್ಗೆ ಯುವಕರ ಬಗ್ಗೆ ವಿಶೇಷವಾಗಿ ಮಹಿಳೆಯರ ಬಗ್ಗೆ ಹೆಚ್ಚಿನ ಹೊತ್ತನ್ನ ಕೊಡಬೇಕು ಎನ್ನುವ ಭಾವನೆಯನ್ನು ಕೇಂದ್ರ ಸರ್ಕಾರ ಸಾಧನೆಯನ್ನು ಮಾಡಿದೆಯೋ ಅದು ನಮಗೆ ಹೆಚ್ಚಿನ ಲಾಭವಾಗಲಿದೆ. ಇಡೀ ದೇಶವನ್ನ ಒಗ್ಗೂಡಿಸಿದಂತಹ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಸ್ಥಾಪನೆ ಏನಾಗಿದೆ ಇದು ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಲಾಭವಾಗುವುದಿದೆ.. ಎಲ್ಲಾ ಅಂಶಗಳನ್ನು ಗಮನಿಸಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನ ಎಂ ಡಿ ಎ ಪಡಿಬೇಕು ಆ ದಿಕ್ಕಿನಲ್ಲಿ ನಾವೆಲ್ಲ ಶ್ರಮ ಹಾಕಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿಯುವವರೆಗೆ ತಮ್ಮ ವಯುಕ್ತಿಕ ಕೆಲಸಗಳನ್ನು ಬೇರೆಯವರಿಗೆ ವರ್ಗಾಯಿಸಿ ಚುನಾವಣಾಕಾರ್ಯದಲ್ಲಿ ಭಾಗವಹಿಸಿ, ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ,ಕಮಲದ ಗುರುತನ್ನು ಗೆಲ್ಲಿಸುವುದು ನಮ್ಮಗುರಿಯಾಗಬೇಕು.ಕಾಂಗ್ರೆಸ್ ಸೋಲಿಸಲು ಪಣತೊಡಬೇಕು.ಕಾಂಗ್ರೆಸ್ ಸರ್ಕಾರದ ವೈಫಲ್ಯ ನಮ್ಮ ಗೆಲುವಿಗೆ ಸುಲಭವಾಗಲಿದೆ.ಆದರೆ ನಾವು ನಿರ್ಲಕ್ಷ್ಯ ವಹಿಸದೇ ಪ್ರತಿ ಚುನಾವಣೆಯನ್ನು ಸಹ ಹೊಸ ಆರಂಭ ಎನ್ನುವಂತೆ ಗಮನಿಸಬೇಕೆಕಂದು ಬಿಎಸ್‌ವೈ ಹೇಳಿದ್ದು, ಅವರ ಸಂದೇಶದಂತೆ ಅತಿಯಾದ ಆತ್ಮವಿಶ್ವಾಸದಿಂದ ಸುಮ್ಮನಿರದೇ ಜವಬ್ದಾರಿಯಿಂದ  ಶ್ರಮಿಸಬೇಕು.ಬಿಜೆಪಿಅಭ್ಯರ್ಥಿಗೆಲುವಿಗೆ ಸ್ಪಂದಿಸಬೇಕು ಎಂದರು.

ಮಾಜಿ ಶಾಸಕರಾದ ತಿಪ್ಪೇಸ್ವಾಮಿ ಮಾತನಾಡಿ, ಬಿಜೆಪಿ ಪಕ್ಷಕ್ಕೆ  ರಾಜ್ಯಾಧ್ಯಕ್ಷರಾಗಿ ಬಿ. ವೈ ವಿಜಯೇಂದ್ರ ಬಂದ ಮೇಲೆ ರಾಜ್ಯದಲ್ಲಿ ಸಂಚಲನವನ್ನು ಮೂಡಿಸಿದ್ದಾರೆ. ಪ್ರಧಾನಮಂತ್ರಿ ಮೋದಿಯವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಗೌರವ ತೋರಿಸುತ್ತಾರೆ ಇದರ ಬಗ್ಗೆ ಜನಜಾಗೃತಿ ಆಗಬೇಕಿದೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಪಲವಾಗಿದೆ... ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.ರಾಮನ ಅಸ್ತಿತ್ವವನ್ನೇ ಮುಖ್ಯಮಂತ್ರಿಗಳು ಪ್ರಶ್ನಿಸಿಸುತ್ತಾರೆ.. ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತಾರೆ. ಕಳೆದ ಬಾರಿ ನಾವು ರಾಜ್ಯದಲ್ಲಿ 25 ಸ್ಥಾನಗಳಲ್ಲಿ ಪಡೆದಿದ್ದೆವು ಈಗ ಏನ್‌ಡಿಎ ಆಗಿರುವುದರಿಂದ 28 ಕ್ಕೂ 28 ಸ್ಥಾನ ಗೆಲ್ಲಬೇಕು ಎಂಬ ಗುರಿ ಭಾರತೀಯ ಜನತಾ ಪಾರ್ಟಿ ಇಟ್ಟುಕೊಂಡಿದೆ.. ಆ ನಿಟ್ಟಿನಲ್ಲಿ ಯಶಸ್ವಿ ಆಗುತ್ತೇವೆ ಎಂಬ ನಂಬಿಕೆ ಇದೆ. ರಾಮ ಮಂದಿರ ಇಡೀ ದೇಶವನ್ನು ಒಂದು ಮಾಡಲಿಕ್ಕೆ... ಭಕ್ತಿಯಿಂದ ಇಡೀ ದೇಶ ಒಂದಾಗಬೇಕು ಎಂದು ಕರೆ ನೀಡಿದರು.

ಬಿಜೆಪಿ ಮುಖಂಡ ಲಿಂಗಮೂರ್ತಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲು ಬಿಜೆಪಿ ಗೆಲ್ಲುವ ಭರವಸೆ ಇದ್ದು,ಈ ಕ್ಷೇತ್ರ ಗೆಲ್ಲುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ.ಹೀಗಾಗಿ ಎಲ್ಲರು ತಮ್ಮ ವಯಕ್ತಿಕ ಕೆಲಸ ಬದಿಗಿಟ್ಟು,ದೇಶ ಸೇವೆಯಲ್ಲಿ ಭಾಗವಹಿಸಬೇಕು. ಮೋದಿಗೆದ್ದರೆ ದೇಶಗೆದ್ದಂತೆ ಎಂದುಭಾವಿಸಿ, ಬಿಜೆಪಿಗೆಲ್ಲಿಸಲು ಎಲ್ಲರು ದುಡಿಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ ವಹಿಸಿದ್ದರು,  ಮಾಜಿ ಶಾಸಕ ರಾಜೇಶ್ ಗೌಡ, ಮಾಧುರಿ ಗೀರೀಶ್, ಸಂಪತ್, ಸಿದ್ದಾಪುರ ಸುರೇಶ್, ಭಾರ್ಗವಿ ದ್ರಾವಿಡ್, ಶೈಲಾಜ ರೆಡ್ಡಿ, ಮಂಜುನಾಥ್, ಡಾ.ಸಿದ್ಧಾರ್ಥ, ಶಂಕ್ರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
a narayanaswamychitradurgaLok Sabha electionsuddioneUnion Minister A. Narayana Swamyvictory of BJP partyಕಾರ್ಯಕರ್ತರು ಶ್ರಮವಹಿಸಿಕೇಂದ್ರ ಸಚಿವ ಎ. ನಾರಾಯಣ ಸ್ವಾಮಿಚಿತ್ರದುರ್ಗಬಿಜೆಪಿ ಪಕ್ಷಲೋಕಸಭಾ ಚುನಾವಣೆಸುದ್ದಿಒನ್
Advertisement
Next Article