Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಈ ಊರುಗಳಲ್ಲಿ ಆಗಸ್ಟ್ 24 ರಿಂದ 27 ರವರೆಗೆ ಕರೆಂಟ್ ಇರಲ್ಲ...!

05:46 PM Aug 23, 2024 IST | suddionenews
Advertisement

ಚಿತ್ರದುರ್ಗ. ಆ.23:  ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹಿರೆಗುಂಟನೂರು ಶಾಖಾ ವ್ಯಾಪ್ತಿಯಲ್ಲಿ ಬರುವ ಹಿರೇಗುಂಟನೂರು ಗ್ರಾಮದಿಂದ ಗುತ್ತಿನಾಡು ಗ್ರಾಮದವರೆಗೆ 11ಕೆವಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿAದ ಇದೇ ಆಗಸ್ಟ್ 24 ರಿಂದ 27 ರವರೆಗೆ ಬೆಳಿಗ್ಗೆ 11 ಗಂಟೆಯಿAದ ಸಂಜೆ 5 ಗಂಟೆಯರೆಗೆ ಹಿರೇಗುಂಟನೂರು ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ 11ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Advertisement

ವಿದ್ಯುತ್ ಅಡಚಣೆಯಾಗುವ ಮಾರ್ಗಗಳು: 66/11 ಕೆವಿ ಹಿರೆಗುಂಟನೂರು ವಿವಿ ಕೇಂದ್ರದಿAದ ಸರಬರಾಜಾಗುವ 11 ಕೆವಿ ಮಾರ್ಗದ ಎಫ್-9 ಸೀಬಾರ ಮತ್ತು ಎಫ್-10 ಬೀರಾವರ ಎನ್.ಜೆ.ವೈ 11 ಕೆ.ವಿ ಮಾರ್ಗಗಳಲ್ಲಿ ಅಡಚಣೆಯಾಗುತ್ತದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 66/11 ಕೆವಿ ಹಿರೇಗುಂಟನೂರು ವ್ಯಾಪ್ತಿಯ ಹಿರೇಗುಂಟನೂರು ಗೊಲ್ಲರಹಟ್ಟಿ, ಚಿಕ್ಕಪುರ, ಸೀಬಾರ, ಗುತ್ತಿನಾಡು, ಈಚಲನಾಗೇನಹಳ್ಳಿ, ಹುಣಸೆಕಟ್ಟೆ, ಸಾದರಹಳ್ಳಿ, ಕೆ.ಬಳ್ಳೆಕಟ್ಟೆ ಹಾಗೂ ಬೀರಾವರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Advertisement

Advertisement
Tags :
bengaluruchitradurgaNo electricitysuddionesuddione newsಕರೆಂಟ್ ಇರಲ್ಲಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article