Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ| ನಿರಾಶ್ರಿತರ ಬಾಳಲ್ಲಿ  ಬೆಳಕಾಗಿರುವ ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ.ಪ್ರದೀಪ್

09:28 PM Oct 22, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ತಾಲ್ಲೂಕಿನ ಗೊನೂರುನಲ್ಲಿರುವ ನಿರಾಶ್ರಿತರ  ಪರಿಹಾರ ಕೇಂದ್ರಕ್ಕೆ ಕಾಲಕಾಲಕ್ಕೆ  ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ ಪ್ರದೀಪ್ ಬಿ .ಜಿ, ನೇತ್ರಾಧಿಕಾರಿ  ಕೆ. ಸಿ.ರಾಮು ಹಾಗೂ ತಂಡದವರು ಭೇಟಿ ನೀಡಿ ಇಲ್ಲಿರುವ ನಿರಾಶ್ರಿತರ ನೇತ್ರ ಪರೀಕ್ಷೆ ನೆಡಿಸಿ ಹಾಗು  ದೃಷ್ಟಿ ದೋಷ ನಿವಾರಣೆ ಹಾಗು ಪೊರೆ ಇರುವವರಿಗೆ ಜಿಲ್ಲಾ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿಯಲ್ಲಿ  ಸೋಮವಾರ ಅ 20 ರಂದು 19 ಜನರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ನೆಡಸುವುದರ ಮೂಲಕ  ನಿರಾಶ್ರಿತರ ಬಾಳಲ್ಲಿ  ಬೆಳಕಾಗಿ ಬೆಳಗಿದ್ದಾರೆ.

ಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಗಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಂತ ಫಲಾನುಭವಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು  ಅನುಸರಿಸಬೇಕೆಂದು ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ ಪ್ರದೀಪ್ ಬಿ.ಜಿ ತಿಳಿಸಿದರು.

Advertisement

ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ  ವರ್ಷದಲ್ಲಿ 22 ಜನ ನಿರಾಶ್ರಿತರಿಗೆ ಹಾಗೂ 1100 ರಕ್ಕೂ ಹೆಚ್ಚು ಫಲಾನುಭವಿಗಳಿಗೆ  ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಡಾ ಪ್ರದೀಪ್ ನಡೆಸಿದ್ದು, ಹೆಸರಿಗೆ ತಕ್ಕಂತೆ  ದೀಪವಾಗಿ ಇವರ ಕಾರ್ಯಗಳು  ಶ್ಲಾಘಾನೀಯಯೆಂದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎಸ್ .ಪಿ. ರವೀಂದ್ರ  ಪ್ರಶಂಶಿಸಿದ್ದಾರೆ.

ಹಾಗೆಯೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಪ್ರತಿ ತಿಂಗಳು ಎರಡನೇ ಶುಕ್ರವಾರ  ವಿಠ್ಠಲ ಕಣ್ಣಿನ ಆಸ್ಪತ್ರೆಯ ರೆಟಿನಾ ಸ್ಪೆಷಲಿಸ್ಟ್  ತಪಾಸಣೆಗೆ ಭೇಟಿ ನೀಡುತ್ತಿದ್ದು , ಈ  ಸೌಲಭ್ಯವನ್ನು ಚಿತ್ರದುರ್ಗದ ಜನತೆಯು ಸದುಪಯೋಗ ಪಡೆಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಚಿಕಿತ್ಸಾ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ
ಡಾ ಎಸ್ ಪಿ ರವೀಂದ್ರ, ಟಿ ಹೆಚ್ ಓ  ಡಾ ಗಿರೀಶ್, ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ ನಾಗರಾಜ್, ಡಾ. ಶಿಲ್ಪಾ, ಶುಶ್ರೂಷಕರಾದ ಲಕ್ಷ್ಮಿ, ,ಸುನಂದಾದೇವಿ, ಸಿಂಧು, ಶಾರದಾ ಹಾಗೂ ಮತ್ತಿತರರಿದ್ದರು.

Advertisement
Tags :
bengaluruchitradurgaDistrict hospitalDr. PradeepOphthalmologistsuddionesuddione newsಚಿತ್ರದುರ್ಗಜಿಲ್ಲಾಸ್ಪತ್ರೆಡಾ.ಪ್ರದೀಪ್ನಿರಾಶ್ರಿತರುನೇತ್ರತಜ್ಞಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article