Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಮಹಿಳೆ ಮೇಲೆ ಹಲ್ಲೆ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

06:29 PM Mar 23, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.23 : ನಗರದ ಹೊರವಲಯದಲ್ಲಿರುವ ರಾಜೀವ್‍ಗಾಂಧಿ ಆಶ್ರಯ ಬಡಾವಣೆ ಎರಡನೆ ಹಂತದಲ್ಲಿ ವಾಸವಾಗಿರುವ ಮಾದಿಗ ಜನಾಂಗದ 22 ವರ್ಷದ ವಿವಾಹಿತೆ ಅನಿತಾಳ ಮೇಲೆ ಇದೆ ಬಡಾವಣೆಯ ಏಳು ಜನ ಗುಂಪು ಸೇರಿಕೊಂಡು ಕಳೆದ ಹದಿನೈದರಂದು ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಸಾಮಾಜಿಕ ಸಂಘರ್ಷ ಸಮಿತಿ ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ರಕ್ಷಣಾ ಇಲಾಖೆಯನ್ನು ಒತ್ತಾಯಿಸಿದೆ.

Advertisement

ಸದ್ದಾಂ, ಸಬೀಯಾ, ರೇಷ್ಮ, ನಗ್ಮಾ, ಅನ್ವರ್, ಯಾಸಿನ್ ಮತ್ತು ಅಕ್ರಂ ಇವರುಗಳು ಏಕಾಏಕಿ ಅನಿತಾಳ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾತುಗಳನ್ನಾಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅನಿತಾ ಚೇತರಿಸಿಕೊಂಡು ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ. ಅಡ್ಡಗಟ್ಟಿದ ಆರೋಪಿಗಳು ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ. ಇದನ್ನು ಕಂಡ ಚಂದ್ರು, ಮತ್ತು ಅನಿತಾಳ ಅಣ್ಣ ಮಂಜುನಾಥ್ ಹಲ್ಲೆಕೋರರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಪರಿಣಾಮ ಎಫ್.ಐ.ಆರ್. ದಾಖಲಾಗಿದ್ದರೂ ಇನ್ನು ತಪ್ಪಿತಸ್ಥರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿರುವ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಕುಮಾರ್, ಜಿಲ್ಲಾಧ್ಯಕ್ಷ ಕಣುಮೇಶ್, ರಾಜ್ಯ ಗೌರವಾಧ್ಯಕ್ಷ ಡಿ.ದುರುಗೇಶ್, ಕಾರ್ಯಾಧ್ಯಕ್ಷ ಸಿ.ಚಿಕ್ಕಣ್ಣ, ಕಾರ್ಯದರ್ಶಿ ರಾಮುಗೋಸಾಯಿ, ಖಜಾಂಚಿ ರಾಮಲಿಂಗಪ್ಪ, ಉಪಾಧ್ಯಕ್ಷ ಡಿ.ಯಲ್ಲಪ್ಪ ಇವರುಗಳು ತಕ್ಷಣವೇ ಹಲ್ಲೆಕೋರರನ್ನು ಬಂಧಿಸಿ ಮಂಜುಳಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

Advertisement
Tags :
against culpritsAssault on womanbengaluruchitradurgalegal actionSocial Conflict Committeesuddionesuddione newsಕಾನೂನು ಕ್ರಮಚಿತ್ರದುರ್ಗತಪ್ಪಿತಸ್ಥರಬೆಂಗಳೂರುಮಹಿಳೆ ಮೇಲೆ ಹಲ್ಲೆಸಾಮಾಜಿಕ ಸಂಘರ್ಷ ಸಮಿತಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article