Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚನ್ನಪಟ್ಟಣ ಉಪಕದನದಲ್ಲಿ ಮುಸ್ಲಿಂ ಮತಕ್ಕಾಗಿ ನಡಿತಿದ್ಯಾ ದಳಪತಿಗಳು ಹಾಗೂ ಸಿಪಿವೈ ನಡುವೆ ತಂತ್ರ-ರಣತಂತ್ರ..?

09:21 PM Oct 26, 2024 IST | suddionenews
Advertisement

ಚನ್ನಪಟ್ಟಣ: ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕ್ಷೇತ್ರ ಹೆವಿ ಹೈಪ್ ಕ್ರಿಯೇಟ್ ಮಾಡಿರುವ ಕ್ಷೇತ್ರವಾಗಿದೆ. ಸಿಪಿ ಯೋಗೀಶ್ವರ್ ರನ್ನ ಕಾಂಗ್ರೆಸ್ ಗೆ ಕರೆತಂದಿರೋ ಡಿಕೆ ಬ್ರದರ್ಸ್ ಗೂ ಗೆಲುವು ಮುಖ್ಯವಾದರೆ, ಅತ್ತ ಸಿಪಿ ಯೋಗೀಶ್ವರ್ ವಿರುದ್ಧ ಪಣ ತೊಟ್ಟಿರುವ ದಳಪತಿಗಳಿಗೆ ಗೆಲುವು ಬಹಳ ಮುಖ್ಯವಾಗಿದೆ. ಈಗ ಸಿಪಿ ಯೋಗೀಶ್ವರ್ ಎದುರು ನಿಖಿಲ್ ಅವರನ್ನು ಗೆಲ್ಲಿಸಲು ಕುಮಾರಸ್ವಾಮಿ ಮತಗಳ ಎಣಿಕೆ ಶುರು ಮಾಡಿದ್ದಾರೆ. ಮುಸ್ಲಿಂ ಮತಗಳನ್ನು ಸೆಳೆಯಲು ಪ್ಲ್ಯಾನ್ ಮಾಡಿದ್ದಾರೆ. ಸಿಪಿ ಯೋಗೀಶ್ವ್ ಕೂಡ ಮುಸ್ಲಿಂ ಮುಖಂಡರನ್ನು ಭೇಟಿಯಾಗಿದ್ದಾರೆ.

Advertisement

ಚನ್ನಪಟ್ಟಣ ಭಾಗದಲ್ಲಿ ಅತಿ ಹೆಚ್ಚು ಒಕ್ಕಲಿಗ ಮತಗಳೇ ಇರುವ ಕಾರಣ, ಕುಮಾರಸ್ವಾಮಿಗೆ ಗೆಲುವು ಒಲಿದಿತ್ತು. ಇದೀಗ ಅದೇ ಭರವಸೆಯ ಮೇಲೆ ಮಗನನ್ನು ನಿಲ್ಲಿಸಿದ್ದಾರೆ. ಆದರೆ ಬೇರೆ ಬೇರೆ ಸಮುದಾಯಗಳ, ಜಾತಿಗಳ ಮತಗಳು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಚನ್ನಪಟ್ಟಣದಲ್ಲಿ ಒಟ್ಟು 2,32,375 ಮತಗಳಿವೆ. ಅದರಲ್ಲಿ 1.5 ಲಕ್ಷ ಒಕ್ಕಲಿಗ ಮತಗಳಿದ್ದರೆ, 40 ಸಾವಿರ ಪರಿಶಿಷ್ಟ ಪಂಗಡದವರಿದ್ದಾರೆ. ಇನ್ನು 32 ಸಾವಿರ ಮುಸ್ಲಿಂ ಮತಗಳು ಇದಾವೆ. ಈ ಮತಗಳನ್ನು ನೆಗ್ಲೆಕ್ಟ್ ಮಾಡುವ ಹಾಗಿಲ್ಲ. ಹೀಗಾಗಿ ಕುಮಾರಸ್ವಾಮಿ ಈಗ ಮುಸ್ಲಿಂರ ಓಲೈಕೆ ಮಾಡಲು ಶುರು ಮಾಡಿದ್ದಾರೆ. ಕೆಲ ಮುಸ್ಲಿಂ ಮುಖಂಡರು ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ ಎನ್ನಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಸೈನಿಕ ಫುಲ್ ಅಲರ್ಟ್ ಆಗಿದ್ದು, ಚನ್ನಪಟ್ಟಣದ ತಮ್ಮ ಸ್ವಗೃಹದಲ್ಲಿ ಮುಸ್ಲಿಂ ಮುಖಂಡರ ಸಭೆ ಕರೆದಿದ್ದಾರೆ. ಬೆಂಬಲವನ್ನು ಕೋರಿದ್ದಾರೆ. ಅತ್ತ ಕುಮಾರಸ್ವಾಮಿ ಅವರು ಮಾತ್ರ ಎಲ್ಲಾ ಶಾಸಕರಿಗೂ ಪಂಚಾಯ್ತಿ ಮಟ್ಟದಿಂದ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

Advertisement

Advertisement
Tags :
bengaluruchannapatnachitradurgaMuslim votesuddionesuddione newsಚನ್ನಪಟ್ಟಣಚಿತ್ರದುರ್ಗಬೆಂಗಳೂರುಮುಸ್ಲಿಂ ಮತಸಿಪಿವೈಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article