ಚನ್ನಪಟ್ಟಣ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಘುನಂದನ್ ಸಂಧಾನ ಸಫಲ : ಡಿಕೆ ಬ್ರದರ್ಸ್ ಮಾತುಗೆ ಒಪ್ಪಿಗೆ..!
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯ ಕಣ ಬಿಸಿಯಾಗಿದೆ. ದಳಪತಿಗಳ ಕ್ಯಾಂಡಿಡೇಟ್ ಅನ್ನ ಹೇಗಾದರು ಮಾಡಿ ಸೋಲಿಸಲೇಬೇಕೆಂದು ಡಿಕೆ ಬ್ರದರ್ಸ್ ಕಾಯ್ತಿದ್ದಾರೆ. ಅತ್ತ ಡಿಕೆ ಬ್ರದರ್ಸ್ ಪ್ಲ್ಯಾನ್ ಉಲ್ಟಾ ಮಾಡುವುದಕ್ಕಾಗಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿ, ನಿಖಿಲ್ ಗೆಲುವಿಗಾಗಿ ದಳಪತಿಗಳು ಓಡಾಡುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುನಂದನ್ ಮನವೊಲಿಸುವಲ್ಲೂ ಡಿಕೆ ಬ್ರದರ್ಸ್ ಯಶಸ್ವಿಯಾಗಿದ್ದಾರೆ.
ಮೈಸೂರು ಇನ್ಫ್ರಾಸ್ಟ್ರಕ್ಟರ್ ಕಾರಿಡಾರ್ ಪ್ಲ್ಯಾನಿಂಗ್ ಅಥಾರಿಟಿ ಅಧ್ಯಕ್ಷ ರಘುನಂದನ್ ಚನ್ನಪಟ್ಟಣದ ಉಪಚುನಾವಣೆಗೆ ಟಿಕೆಟ್ ಸಿಗುತ್ತೆ ಎಂದು ಭಾವಿಸಿದ್ದರು. ಆದರೆ ಡಿಕೆ ಬ್ರದರ್ಸ್ ಪ್ಲ್ಯಾನ್ ಬೇರೆ ಆಗಿತ್ತು. ದಳಪತಿ ಎದುರು ಹೋರಾಡುವ ಸ್ಪರ್ಧಿಯನ್ನೇ ಕಣಕ್ಕೆ ಇಳಿಸಿದರು. ಇದರಿಂದ ಬೇಸರಗೊಂಡಿದ್ದ ರಘುನಂದನ್ ರಾಮಣ್ಣ ಅವರನ್ನು ಸಮಾಧಾನಗೊಳಿಸುವಲ್ಲಿ ಡಿಕೆ ಬ್ರದರ್ಸ್ ಯಶಸ್ವುಯಾಗಿದ್ದಾರೆ.
ಇಂದು ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಯೋಗೀಶ್ವರ್ ಅವರ ಮುಂದೆಯೇ ರಘಿನಂದನ್ ಸಂಧಾನ ಸಭೆ ನಡೆದಿದೆ. ಕಡೆಯಲ್ಲಿ ನಾನು ಯೋಗೀಶ್ವರ್ ಗೆಲುವಿಗಾಗಿ ಕೆಲಸಮಾಡುತ್ತೇನೆ ಎಂದು ರಘುನಂದನ್ ತಿಳಿಸಿದ್ದಾರೆ. ಅವರ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದಿದ್ದಾರೆ. ರಘುನಂದನ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದರು. ಚನ್ನಪಟ್ಟಣ ನಗರಸಭೆಯ 14 ಮಂದಿ ಹಾಗೂ ಜೆಡಿಎಸ್ ಪಕ್ಷದ ಇಬ್ಬರನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ ತಾಲೂಕಿನಾದ್ಯಂತ ನೂರಾರು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರನ್ನು ಕಾಂಗ್ರೆಸ್ ಕಾರ್ಯಕರ್ತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮತಗಳು ಏರಿಕೆಯಾಗಿತ್ತು. 17 ಸಾವಿರ ಮತಗಳಿದ್ದದ್ದು 87 ಸಾವಿರಕ್ಕೆ ಏರಿಕೆಯಾಗಿತ್ತು.