Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್ ಸಿಪಿ ಯೋಗೀಶ್ವರ್ ಕೈತಪ್ಪುವ ಸಾಧ್ಯತೆ : ರಾಮನಗರದಿಂದಲೂ ಸ್ಪರ್ಧೆಗೆ ಅಡ್ಡಿ..!

08:36 PM Sep 08, 2024 IST | suddionenews
Advertisement

 

Advertisement

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇನ್ನು ಕೂಡ ಉಪಚುನಾವಣೆಯ ದಿನಾಂಕವೇ ನಿಗಧಿಯಾಗಿಲ್ಲ. ಆದರೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿಪಿ ಯೋಗೀಶ್ಚರ್ ಮುಂದಿದ್ದಾರೆ. ಟಿಕೆಟ್ ನನಗೆ ಸಿಗುತ್ತೆ ಎಂಬ ಆತ್ಮವಿಶ್ವಾಸದಲ್ಲಿ ಇದ್ದಾರೆ. ಈ ಮುಂಚೆ ಕುಮಾರಸ್ವಾಮಿ ಅವರು ಕೂಡ ಇದಕ್ಕೆ ಒಪ್ಪಿದ್ದಾರೆ ಎಂದೇ ಹೇಳಿಕೆ ನೀಡಿದ್ದರು. ಆದರೆ ಈಗ ವಿಚಾರವೇ ಬೇರೆಯಾಗಿದೆ.

ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಸಿಪಿ ಯೋಗೀಶ್ವರ್ ಗೆ ಮಿಸ್ ಆಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಚನ್ನಪಟ್ಟಣದ ಟಿಕೆಟ್ ಸಿಗದೆ ಹೋದಲ್ಲಿ ರಾಮನಗರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಈ ವಿಚಾರ ಕುಮಾರಸ್ವಾಮಿ ಅವರ ಕಿವಿಗೆ ಬಿದ್ದಿದ್ದು, ಆಪ್ತರ ಬಳಿ ಹೇಳಿಕೊಂಡು ಗರಂ ಅಗಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ರಾಮನಗರ ಹಾಗೂ ಚನ್ನಪಟ್ಟಣವನ್ನು ಜೆಡಿಎಸ್ ನಿಂದ ಬಿಡುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರಂತೆ.

Advertisement

ಸಿಪಿ ಯೋಗೀಶ್ವರ್ ಚನ್ನಪಟ್ಟಣ ಟಿಕೆಟ್ ಗಾಗಿ ಕೊನೆ ಗಳಿಗೆಯವರೆಗೂ ಪ್ರಯತ್ನ ಪಡುತ್ತಿದ್ದಾರೆ. ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಬಳಿಯೂ ಲಾಭಿ ಮಾಡಿದ್ದಾರೆ. ಆದರೆ‌ ಕುಮಾರಸ್ವಾಮಿ ನಿರ್ಧಾರದ ಮುಂದೆ ಯಾವ ಪ್ರಯೋಜನವೂ ಆಗುವುದಿಲ್ಲ ಎನಿಸುತ್ತಿದೆ. ಚನ್ನಪಟ್ಟಣ ಬೈ ಎಲೆಕ್ಷನ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಯಾಕಂದ್ರೆ ರಾಜಕೀಯ ಭವಿಷ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಎರಡು ಬಾರಿ ಸೋತಿದ್ದಾರೆ. ಬೈಎಲೆಕ್ಷನ್ ನಲ್ಲಾದರೂ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಎನ್ನಲಾಗಿದೆ. ಇತ್ತ ಡಿಕೆ ಬ್ರದರ್ಸ್ ಕೂಡ ಚನ್ನಪಟ್ಟಣ ಬೈ ಎಲೆಕ್ಷನ್ ಅನ್ನು ಪ್ರತಿಷ್ಠೆಯಾಗಿಯೇ ತೆಗೆದುಕೊಂಡಿದ್ದಾರೆ.

Advertisement
Tags :
bengaluruby electionchannapatnachitradurgaCP Yogeeshwarramanagarasuddionesuddione newsticketಚನ್ನಪಟ್ಟಣಚಿತ್ರದುರ್ಗಟಿಕೆಟ್ಬೆಂಗಳೂರುಬೈಎಲೆಕ್ಷನ್ರಾಮನಗರಸಿಪಿ ಯೋಗೀಶ್ವರ್ಸುದ್ದಿಒನ್ಸುದ್ದಿಒನ್ ನ್ಯೂಸ್ಸ್ಪರ್ಧೆ
Advertisement
Next Article