ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಸಿಎಂಗೆ ಪತ್ರ ಬರೆದ ಚನ್ನಗಿರಿ ಶಾಸಕ..!
ದಾವಣಗೆರೆ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಸದ್ಯ ದಾವಣಗೆರೆಯ ಜಿಲ್ಲಾ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಅವರನ್ನು ಬದಲಾವಣೆ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಕಾಂಗ್ರೆಸ್ ಶಾಸಕರಿಂದಾನೇ ಪತ್ರ ಹೋಗಿರುವುದು ಆಶ್ಚರ್ಯವಾಗಿದೆ. ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರೇ ಈ ಸಂಬಂಧ ಪತ್ರ ಬರೆದಿದ್ದಾರೆ.
ಶಾಸಕರು ಬರೆದ ಪತ್ರದಲ್ಲಿ ಏನಿದೆ..?
'ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ನಿರಂತರವಾಗಿ ಬಿಜೆಪಿ ಜೊತೆಗಿನ ಹೊಂದಾಣಿಕೆಯಿಂದವಪಕ್ಷಕ್ಕೆ ತೀವ್ರ ಮುಜುಗರವಾಗುತ್ತಿದೆ. ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರುಗಳು ಅತೀವ ಸಂಕಟ ಅನುಭವಿಸುವಂತಾಗಿದೆ. ಅನಿವಾರ್ಯವಾಗಿ ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ' ಎಂದು ಉಲ್ಲೇಖ ಮಾಡಿದ್ದು, ಜೊತೆಗೆ ವರ್ಗಾವಣೆ ವಿಚಾರದಲ್ಲಿ ದಾವಣಗೆರೆ ಉಸ್ತುವಾರಿ ಸಚುವ ಎಸ್ ಎಸ್ ಮಲ್ಲಿಕಾರ್ಜುನ್ ತೀವ್ರ ವಿರುದ್ಧ ತೀವ್ರ ಆಕ್ಷೇಪ, ಲೋಕೋಪಯೋಗಿ ಇಲಾಖೆ FDA ಐ.ಎಸ್.ಒಡೆನಪುರ್ ವರ್ಗಾವಣೆ ವಿಚಾರದಲ್ಲಿ ಹೊಂದಾಣಿಕೆ ರಾಜಕಾರಣ ಆರೋಪ, ಎಸ್ಎಸ್ ಮಲ್ಲಿಕಾರ್ಜುನ್ ಶಿಫಾರಸ್ಸಿನ ಮೇರೆಗೆ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿಸಿದ್ದು.
ವಿಜಯ್ ಕುಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸದಂತೆ ಸೂಚಿಸಿರುತ್ತಾರೆ. ಒಂದೆಡೆ ಪತ್ರ ನೀಡುವುದು, ಮತ್ತೊಂದೆಡೆ ಇಬ್ಬಾಗೀಯ ನೀತಿ ಅನುಸರಿಸುವುದರ ಹಿಂದಿನ ಮರ್ಮವನ್ನು ತಾವೇ ಪರಿಶೀಲಿಸುವಂತೆ ಕೋರುವೆ. ನಮ್ಮ ಅಭ್ಯರ್ಥಿಯ ಸೋಲಿಗೆ ಕಾರಣವಾದವರ ಬೆಂಬಲಕ್ಕೆ ಮಾನ್ಯ ದಾವಣಗೆರೆ ಜಿಲ್ಲಾ ಉಸ್ತುವಾರಿ ನಿಲ್ಲುವುದು ಸರಿಯೇ..? ಸಚಿವರು ಈ ಹಿಂದೆ ನಡೆದ ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಚನ್ನಗಿರಿ ತಾಲೂಕಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಲಿಲ್ಲ ಎಂಬ ವಿಚಾರಗಳು ಸೇರಿದಂತೆ ಸಾಕಷ್ಟು ಮಾಹಿತಿಯನ್ನು ಪತ್ರದಲ್ಲಿ ಬರೆದಿದ್ದಾರೆ.