For the best experience, open
https://m.suddione.com
on your mobile browser.
Advertisement

ಅದ್ದೂರಿಯಾಗಿ ನಡೆದ ಚಂದನಾ ಅನಂತಕೃಷ್ಣ ಮ್ಯಾರೇಜ್ : ಕಿರುತೆರೆ ನಟ-ನಟಿಯರಿಂದ ಶುಭ ಹಾರೈಕೆ

08:42 PM Nov 28, 2024 IST | suddionenews
ಅದ್ದೂರಿಯಾಗಿ ನಡೆದ ಚಂದನಾ ಅನಂತಕೃಷ್ಣ ಮ್ಯಾರೇಜ್   ಕಿರುತೆರೆ ನಟ ನಟಿಯರಿಂದ ಶುಭ ಹಾರೈಕೆ
Advertisement

ಚಂದನಾ ಅನಂತಕೃಷ್ಣ ಅವರ ಅಭಿಮಾನಿಗಳಿಗೆ ಎರಡೆರಡು ಖುಷಿ. ಒಂದು ಕಡೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚಂದನಾ ತಾಯಿಯಾಗುತ್ತಿರುವ ವಿಚಾರಕ್ಕೆ ಖುಷಿಯಾದರೆ, ಮತ್ತೊಂದು ಕಡೆ ರಿಯಲ್ ಆಗಿ ಮದುವೆಯಾಗಿದ್ದಾರೆ. ಇಂದು ಅದ್ದೂರಿಯಾಗಿ ಚಂದನಾ ಅವೆ ಮದುವೆ ನಡೆದಿದೆ. ಹೀಗಾಗಿ ಅವರ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ನೆಚ್ಚಿನ ನಟಿಯ ಮದುವೆ ಕಂಡು ಶುಭ ಹಾರೈಸಿದ್ದಾರೆ.

Advertisement

ಚಂದನಾ ಅನಂತ ಕೃಷ್ಣ ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಜಾಹ್ನವಿಯ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮುಗ್ಧತೆಯ ಪ್ರತೀಕದಂತೆ ಇದ್ದಾರೆ. ಸೈಕೋ ಗಂಡನನ್ನು ಕಟ್ಟಿಕೊಂಡು ಅವನನ್ನು ಸರಿ ಮಾಡಬೇಕೆಂದು ಹೊರಟಿದ್ದಾರೆ. ಜಯಂತ್ ಹಾಗೂ ಜಾಹ್ನವಿಯ ಬಗ್ಗೆಯೇ ಸೀರಿಯಲ್ ವೀಕ್ಷಕರಿಗೆ ಆಗಾಗ ಟೆನ್ಶನ್ ಜಾಸ್ತಿ.

ಚಂದನಾ ಅನಂತಕೃಷ್ಣ ಮದುವೆ ಇಂದು ಅದ್ದೂರಿಯಾಗಿ, ಶಾಸ್ತ್ರೋಕ್ತವಾಗಿ ನೆರವೇರಿದೆ. ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ, ಚಿನ್ನುಮರಿ ಅಂತಾನೇ ಖ್ಯಾತಿ ಪಡೆದಿರುವ ಜಾಹ್ನವಿ, ಇಂದು ರಿಯಲ್ ಆಗಿ ಮದುವೆಯಾಗಿದ್ದಾರೆ. ಪ್ರತ್ಯಕ್ಷ್ ಜೊತೆಗೆ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿಯೇ ಇಬ್ಬರ ಮದುವೆ ನಡೆದಿದೆ. ಮಧು ಮಗಳಾಗಿ ಚಂದನಾ ಕಂಗೊಳಿಸಿದ್ದು, ಸೋಷಿಯಲ್ ಮೀಡಿಯಾದಲ್ಲೆಲ್ಲಾ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.

Advertisement

ಚಂದನಾ ಅನಂತಕೃಷ್ಣ ಹಾಗೂ ಪ್ರತ್ಯಕ್ಷ್ ಅವರದ್ದು ಕಂಪ್ಲೀಟ್ ಅರೇಂಜ್ ಮ್ಯಾರೇಜ್ ಆಗಿದೆ. ಎರಡು ಕುಟುಂಬದವರು ಸೇರಿ ಮಾತುಕತೆ ನಡೆಸಿ, ಇಂದು ಮದುವೆ ಮಾಡಿದ್ದಾರೆ. ಚಂದನಾ ಅನಂತಕೃಷ್ಣ ಮೂಲತಃ ತುಮಕೂರಿ‌ನವರು‌. ಆಳ್ವಾಸ್ ನಲ್ಲಿ ಪದವಿ ಮುಗಿಸಿದ ಚಂದನಾ ಕಲಾ ಜೀವನದತ್ತ ಬಂದರು. ಈಗ ಇರೋದು ಬೆಂಗಳೂರಿನಲ್ಲಿ. ಸೊಸೆಯಾಗಿರುವುದು ಚಿಕ್ಕಮಗಳೂರಿಗೆ. ಹೌದು ಚಂದನಾ ಅವರ ಅತ್ತೆ-ಮಾವ ಚಿಕ್ಕಮಗಳೂರಿನವರು. ಆದರೆ ಅವರು ಕೂಡ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಪ್ರತ್ಯಕ್ಷ್ ಎಂಟೆಕ್ ಪದವಿ ಮುಗಿಸಿದ್ದು, ಬೆಂಗಳೂರಿನಲ್ಲಿ ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ.

ಚಂದನಾ ಹಾಗೂ ಪ್ರತ್ಯಕ್ಷ್ ಮದುವೆ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗಿದೆ. ಕುಟುಂಬಸ್ಥರು, ನೆಂಟರಿಷ್ಟರು, ಆತ್ಮೀಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ಚಂದನಾ ಅವರ ಮದುವೆಗೆ ಕಿರುತೆರೆ ನಟ-ನಟಿಯರು, ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಸೇರಿದಂತೆ ಆಪ್ತರೆಲ್ಲರು ಹಾಜರಿದ್ದು ಆಶೀರ್ವದಿಸಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್ ತಂಡದವರು ಕೂಡ ಮದುವೆಗೆ ಬಂದು ಹರಸಿದ್ದಾರೆ.

Tags :
Advertisement