For the best experience, open
https://m.suddione.com
on your mobile browser.
Advertisement

ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ : ಶಾಕಿಂಗ್ ನ್ಯೂಸ್

05:47 PM Jun 07, 2024 IST | suddionenews
ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್   ಶಾಕಿಂಗ್ ನ್ಯೂಸ್
Advertisement

ಕನ್ನಡ ಇಂಡಸ್ಟ್ರಿಯಲ್ಲಿ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಕ್ಯೂಟ್ ಕಪಲ್ ರೀತಿ ಕಾಣಿಸಿಕೊಂಡಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇಬ್ಬರು ಸಮ್ಮತಿ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ.

Advertisement
Advertisement

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಬಿಗ್ ಬಾಸ್ ನಲ್ಲಿದ್ದಾಗ ಲವ್ ಮಾಡಿ, ಮದುವೆಯೂ ಆಗಿದ್ದರು. ನಾಲ್ಕು ವರ್ಷ ದಾಂಪತ್ಯ ಜೀವನವನ್ನು ನಡೆಸಿದ್ದರು. ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದರು. 2019ರ ಯುವ ದಸರಾದಲ್ಲಿ ತುಂಬಿದ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದು, ಸಾಕಷ್ಟು ಸುದ್ದಿಯಾಗಿತ್ತು. ಇಬ್ಬರ ನಡುವೆ ಸಾಕಷ್ಟು ಅನ್ಯೋನ್ಯತೆ ಇತ್ತು. ಆದರೆ ದಿಢೀರನೇ ಡಿವೋರ್ಸ್ ಆಗಿರುವುದು ಅದೆಷ್ಟೋ ಜನಕ್ಕೆ ನಂಬಲು ಅಸಾಧ್ಯವಾದಂತೆ ಆಗಿದೆ.

ಇಬ್ಬರ ಡಿವೋರ್ಸ್ ಗೆ ಫ್ಯಾಮಿಲಿ ಕೋರ್ಟ್ ಅನುಮತಿ ನೀಡಿದೆ. ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಮೂರು ಅಂಶಗಳನ್ನು ಉಲ್ಲೇಖಿಸಿದ್ದಾರೆ.
*ನಮ್ಮ ಕರಿಯರ್ ಮೇಲೆ ಗಮನ ಹರಿಸಲು ಬಯಸಿದ್ದೇವೆ
* ನಿವೇದಿತಾ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಹೊರಟಿದ್ದಾರೆ
* ಕೆಲ ಭಿನ್ನಾಭಿಪ್ರಾಯಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ

Advertisement
Advertisement

ವಿಚಾರಣೆ ವೇಳೆ ನ್ಯಾಯಾಧೀಶರು ಇಬ್ಬರನ್ನು ಕರೆದು ಕೇಳಿದ್ದಾರೆ. ಪರಸ್ಪರ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮಿಡಿಯೇಷನ್‌ನಲ್ಲಿ ಡಿವೋರ್ಸ್ ಬಗ್ಗೆ ಒಪ್ಪಂದವಾಗಿದೆ. ಅದರ ಅಗ್ರಿಮೆಂಟ್ ಅನ್ನು ನ್ಯಾಯಾಧೀಶರ ಮುಂದೆ ಸಲ್ಲಿಕೆ ಮಾಡಲಾಗಿದ್ದು, ಅವರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಡಿವೋರ್ಸ್ ಕಾಪಿ ಬಂದ ಬಳಿಕ ಅಧಿಕೃತವಾಗಿ ಡಿವೋರ್ಸ್ ಆಗಲಿದೆ.

Advertisement

Advertisement
Tags :
Advertisement