For the best experience, open
https://m.suddione.com
on your mobile browser.
Advertisement

ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ : ಬೇಗ ಬೇಗ ವೋಟ್ ಮಾಡಿ ಬಿಡಿ

11:48 AM May 07, 2024 IST | suddionenews
ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ   ಬೇಗ ಬೇಗ ವೋಟ್ ಮಾಡಿ ಬಿಡಿ
Advertisement

ಬೆಂಗಳೂರು: ನಿನ್ನೆಯಿಂದ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಇಂದು ಕೂಡ ಹವಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಚಾಮರಾಜನಗರ ಮತ್ತು ರಾಮನಗರದ ಕೆಲವೆಡೆ ಬಾರೀ ಮಳೆಯಾಗಲಿದೆ. ಕೊಡಗು, ಮೈಸೂರಿ, ಮಂಡ್ಯ ಭಾಗದ ಹಲವೆಡೆ ಮಳೆಯಾಗಲಿದೆ ಎಂಬ ಮಾಹಿತಿ ತಿಳಿಸಿದೆ‌.

Advertisement
Advertisement

ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ಮಳೆಯ ಸೂಚನೆಯೂ ಸಿಕ್ಕಿದ್ದು, ಬೇಗ ಬೇಗ ಮತಹಾಕಿದರೆ ಉತ್ತಮವಾಗಲಿದೆ.

Advertisement

ಮಳೆಯಿಲ್ಲದೆ ಕರಾವಳಿ ಭಾಗದಲ್ಲೂ ತಾಪಾಮಾನ ಹೆಚ್ಚಾಗಿತ್ತು. ಆದರೆ ಇಂದು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ರಾಯಚೂರು, ಯಾದಗಿರಿ, ಬಳ್ಳಾರಿಯಲ್ಲೂ ಮಳೆಯಾಗಲಿದೆ. ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ವಿಜಯನಗರ ಮತ್ತು ತುಮಕೂರಿನಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಹಗುರವಾದ ಮಳೆಯಾಗಲಿದೆ.

Advertisement

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಸೇರಿದಂತೆ ಹಲವೆಡೆ ಮಳೆ ಬಿದ್ದರು ಹೀಟ್ ವೇವ್ ಮುಂದುವರೆದಿದೆ. ಬಿಸಿಗಾಳಿಯಿಂದ ಜನ ಇನ್ನಷ್ಟು ಕಂಗಕಾಗಿದ್ದಾರೆ. ಹಲವು ಜಿಲ್ಲೆಗಳಿಗೆ ಹವಮಾನ ಇಲಾಖೆ ಆರೆಂಜ್ ಹಾಗೂ ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ.

Advertisement
Tags :
Advertisement