For the best experience, open
https://m.suddione.com
on your mobile browser.
Advertisement

ಜನರ ಆಸೆಯಂತೆ ನರಕ ಸೇರಿದ ಚೈತ್ರಾ : ಬಿಗ್ ಬಾಸ್ ನಲ್ಲಿ ಜೈಲಿನ ವಿಚಾರಕ್ಕೆ ಖುಷಿ..!

10:17 AM Sep 30, 2024 IST | suddionenews
ಜನರ ಆಸೆಯಂತೆ ನರಕ ಸೇರಿದ ಚೈತ್ರಾ   ಬಿಗ್ ಬಾಸ್ ನಲ್ಲಿ ಜೈಲಿನ ವಿಚಾರಕ್ಕೆ ಖುಷಿ
Advertisement

ಇಂದಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ. ಈ ಹಿಂದೆಯೇ ಊಹೆ ಮಾಡಿದ್ದಂತ ಕಂಟೆಸ್ಟೆಂಟ್ ಗಳೇ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಅದರಲ್ಲೂ ಚೈತ್ರಾ ಎಂಟ್ರಿಯಾಗುವುದಕ್ಕೂ ಮುನ್ನ ಜನರಿಂದ ಸಾಕಷ್ಟು ಕಮೆಂಟ್ ಗಳು ಬಂದಿದ್ದವು. ಭಾನುವಾರ ಅಧಿಕೃತವಾಗಿ ಓಪನ್ ಆದ ಬಿಗ್ ಬಾಸ್ ಮನೆಗೆ ಹೋಗುವವರು ಯಾರು ಎಂಬುದರ ಲೆಕ್ಕಚಾರದಲ್ಲಿ ಗೌತಮಿ, ಲಾಯರ್ ಜಗದೀಶ್, ಚೈತ್ರಾ, ಗೋಕ್ಡ್ ಸುರೇಶ್ ಹೆಸರು ರಾಜಾರಾಣಿಯಲ್ಲಿಯೇ ರಿವೀಲ್ ಆಗಿತ್ತು.

Advertisement
Advertisement

ಜೊತೆಗೆ ಬಿಗ್ ಬಾಸ್ ವೀಕ್ಷಕರಿಗೆ ಅವಕಾಶ ನೀಡಿತ್ತು. ಚೈತ್ರಾ ಬಗ್ಗೆ ವೋಟ್ ಮಾಡಲು ತಿಳಿಸಿತ್ತು. ಅದರಂತೆ ಲಕ್ಷಾಂತರ ಜನ ವೋಟ್ ಕೂಡ ಮಾಡಿದ್ದಾರೆ. ಅದರ ಜೊತೆಗೆ ಕಮೆಂಟ್ ಕೂಡ ಮಾಡಿದ್ದರು. ಚೈತ್ರಾ ಅವರನ್ನು ಮೊದಲು ನರಕಕ್ಕೆ ಕಳುಹಿಸಿ ಎಂದು ಸಲಹೆ ನೀಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ನರಕದ ಕಮೆಂಟ್ ಬಂದಿರುವುದಕ್ಕೆ ಬಿಗ್ ಬಾಸ್ ಕೂಡ ಚೈತ್ರಾ ಅವರನ್ನು ನರಕಕ್ಕೆ ಕಳುಹಿಸಿದೆ.

ಚೈತ್ರಾ ಖ್ಯಾತ ವಾಗ್ಮಿ ಎನಿಸಿಕೊಂಡಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಉದ್ಯಮಿಯೊಬ್ಬರಿಂದ ಕೋಟ್ಯಾಂತರ ರೂಪಾಯಿ ಹಣ ಮೋಸ ಮಾಡಿದ್ದ ಆರೋಪದ ಮೇಲೆ ಜೈಲು ಸೇರಿದ್ದರು. ಜೈಲಿನಲ್ಲಿದ್ದಾಗಲೇ ಬಿಗ್ ಬಾಸ್ ಅನ್ನು ನೋಡಿದ್ದರಂತೆ. ಮೊದಲೇ ಎಂಟ್ರಿ ಕೊಟ್ಟಿದ್ದ ಲಾಯರ್ ಜಗದೀಶ್ ಕೂಡ ಬಿಗ್ ಬಾಸ್ ಅನ್ನ ಜೈಲಿನಲ್ಲಿಯೇ ನೋಡಿದ್ದರಂತೆ. ಇಬ್ಬರು ಬಿಗ್ ಬಾಸ್ ವೇದಿಕೆ ಮೇಲೆ ನಿಂತು ಜೈಲಿನ ದಿನಗಳನ್ನು ನೆನೆದು ಎಂಜಾಯ್ ಮಾಡಿದ್ದಾರೆ. ಜೂನಿಯರ್ - ಸೀನಿಯರ್ ಎಂಬೆಲ್ಲಾ ಮಾತುಕತೆಗಳು ಜೋರಾಗಿದ್ದವು.

Advertisement
Advertisement

Advertisement
Tags :
Advertisement