Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಸಂಭ್ರಮದ ಮಕರ ಸಂಕ್ರಾಂತಿ ಆಚರಣೆ

04:44 PM Jan 12, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.12 : ನಗರದ‌ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ 3 ಮತ್ತು 4 ನೇ ತರಗತಿಯ ಮಕ್ಕಳಿಂದ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿಯ ಹಬ್ಬವನ್ನು ಆಚರಿಸಲಾಯಿತು.

Advertisement

ಶಾಲೆಯ ಪ್ರಾಂಶುಪಾಲ ಪ್ರಭಾಕರ್ ಎಮ್ ಎಸ್ ಮಾತನಾಡಿ,
ಸಂಕ್ರಾಂತಿ ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನಲೆಯುಳ್ಳ ಹಬ್ಬವಾಗಿದೆ ಹಾಗೂ ಹಬ್ಬ ಒಂದೇ ಆದರೂ ಬೇರೇ ಬೇರೇ ರಾಜ್ಯಗಳಲ್ಲಿ ಬೇರೇ ಬೇರೇ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು "ಸಂಕ್ರಾಂತಿ" ಈ ರೀತಿಯ ಆಚರಣೆಗೆ ಒಳಪಡುವ ಹಬ್ಬವಾಗಿದೆ. ಹಾಗೂ ಮಕರ ಸಂಕ್ರಾಂತಿಯಂದು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಪಡೆಯುತ್ತಾನೆ. ಇದು ಸೂರ್ಯನು ಉತ್ತರ ದಿಕ್ಕಿಗೆ ಪ್ರಯಾಣ ಮಾಡುವುದರ ಜೊತೆಗೆ ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಈ ದಿನದಂದು ಜಾನುವಾರಗಳನ್ನು ಕಿಚ್ಚಿಗೆ ಹಾಯಿಸುವುದು. ಎಳ್ಳುಬೆಲ್ಲದಿಂದ ತಯಾರಿಸಿದ ಸಿಹಿತಿನಿಸುಗಳನ್ನು ತಿನ್ನುವುದು, ವಿವಿಧ ರೀತಿ ಆಚರಣೆಗಳು ಮತ್ತು ಈ ಹಬ್ಬದ ಭಾಗವಾಗಿದೆ ಎಂದು ಹೇಳಿದರು.

Advertisement

ಮಕರ ಸಂಕ್ರಾಂತಿಯನ್ನು ಸೂಚಿಸುವ ಸೂರ್ಯ ದೇವರಿಗೆ ಸಮರ್ಪಿತ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಸಂಭ್ರಮವನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಯ ಹೊರಾಂಗಣದ ಪ್ರವೇಶ ದ್ವಾರದ ಹೊರಗೆ ಹೂವು, ತಳಿರುತೋರಣ. ಕಬ್ಬು, ವರ್ಣರಂಜಿತ ರಂಗೋಲಿಯಿಂದ ಅಲಂಕರಿಸಿ ನಂತರ ಪೊಂಗಲ್ ತಯಾರಿಸಿದರು. ಇವು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಸುಗ್ಗಿಯ ಬೆಳೆಗಾಗಿ ಸೂರ್ಯ ದೇವರಿಗೆ ಕೃತಜ್ಞತೆ ಸಲ್ಲಿಸಲು ಸಾಂಪ್ರದಾಯಕ ಹಾಗೂ ವರ್ಣರಂಜಿತ ಉಡುಗೆಯಲ್ಲಿ ವಿದ್ಯಾರ್ಥಿಗಳು ನೆರೆದಿದ್ದರು.

ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿದರು.

ಈ ಕಾರ್ಯಕ್ರಮವನ್ನು ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ ಹಾಗೂ ಎಸ್.ಆ‌ರ್.ಎಸ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ ಉಪಾಧ್ಯಕ್ಷರಾದ ಅಮೋಫ್ ಬಿ ಎಲ್ ಹಾಗೂ ಆಡಳಿತ ಮಂಡಳಿ ಪ್ರಶಂಶಿಸಿದ್ದಾರೆ. ಶೈಕ್ಷಣಿಕ ಸಂಯೋಜಕರು, ಶಿಕ್ಷಕವೃಂದದವರು ಉಪಸ್ಥಿತರಿದ್ದರು.

Advertisement
Tags :
celebrationchitradurgaMakar SankrantiSRS Heritage SCHOOLsrs herritage schoolಎಸ್. ಆರ್. ಎಸ್. ಹೆರಿಟೇಜ್ ಶಾಲೆಚಿತ್ರದುರ್ಗಮಕರ ಸಂಕ್ರಾಂತಿ ಆಚರಣೆ
Advertisement
Next Article