Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಸಂಭ್ರಮದ ಬಕ್ರೀದ್ : ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

02:58 PM Jun 17, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂ.17  : ತ್ಯಾಗ ಬಲಿದಾನಗಳ ಸಂಕೇತ ಬಕ್ರಿದ್ ಹಬ್ಬದ ಪ್ರಯುಕ್ತ ಚಂದ್ರವಳ್ಳಿ ಮೈದಾನ ಹಾಗೂ ದಾವಣಗೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Advertisement

ಶ್ವೇತ ವಸ್ತ್ರದಾರಿಗಳಾಗಿದ್ದ ಮುಸ್ಲಿಂರು ತಲೆಗೆ ಬಿಳಿ ಟೋಪಿ ಧರಿಸಿ ಪ್ರಾರ್ಥನೆಯಲ್ಲಿ ತೊಡಗಿದ್ದರು.
ಕೆಲವರು ಮನೆಯಿಂದ ಚಾಪೆ, ಜಮಖಾನ ತಂದು ನೆಲದಲ್ಲಿ ಹಾಸಿಕೊಂಡು ಅಲ್ಲಾನನ್ನು ಪ್ರಾರ್ಥಿಸಿದರು.

ಚಂದ್ರವಳ್ಳಿ ಫೈರಿಂಗ್ ರೇಂಜ್ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಇಲಾಹಿಮುನ್ನ, ಮೆಹಬೂಬ್‍ಖಾನ್, ಅಯೂಬ್, ರಿಜ್ವಾನ್, ಇರ್ಫಾನ್, ಎಜಾಜ್, ಅಶ್ವಾಖ್, ವಿಖಾರ್, ನಾಸಿರ್, ಗೌಸ್‍ಪೀರ್ ಇನ್ನು ಅನೇಕರು ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಎ.ಜಾಕಿರ್‍ಹುಸೇನ್, ಚಾಂದ್‍ಪೀರ್ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ತೊಡಗಿದ್ದರು.

ಪ್ರಾರ್ಥನೆಯ ನಂತರ ಪರಸ್ಪರರು ಅಪ್ಪಿಕೊಂಡು ಬಕ್ರಿದ್ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು. ದಾವಣಗೆರೆ ರಸ್ತೆಯಲ್ಲಿ ಬ್ಯಾರಿಕೇಡ್‍ಗಳನ್ನು ಅಡ್ಡವಿಟ್ಟು ಪೊಲೀಸರು ಸಂಚಾರವನ್ನು ನಿಯಂತ್ರಿಸುತ್ತಿದ್ದರು.

Advertisement
Tags :
bengaluruCelebration of Bakridchitradurgamass prayersMuslim devoteessuddionesuddione newsಚಿತ್ರದುರ್ಗಬೆಂಗಳೂರುಮುಸ್ಲಿಂ ಬಾಂಧವರುಸಂಭ್ರಮದ ಬಕ್ರೀದ್ಸಾಮೂಹಿಕ ಪ್ರಾರ್ಥನೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article