Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜಾತಿಗಣತಿ ಜಾರಿಯಿಂದ ಸರ್ಕಾರ ಉರುಳುತ್ತದೆ ಎಂದಾದರೇ ಹಾಗೆಯೇ ಆಗಲಿ : ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ

04:38 PM Oct 06, 2024 IST | suddionenews
Advertisement

ಬೆಂಗಳೂರು: ಜಾತಿಗಣತಿ ಜಾರಿಯಾಗಲಿದೆ ಎಂದು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದಾಗಿನಿಂದ ಪರ-ವಿರೋಧ ಚರ್ಚೆಗಳು ಕೇಳಿ ಬರುತ್ತಲೇ ಇದಾವೆ. ಆದರೆ ಸರ್ಕಾರದಿಂದ ಮಾತ್ರ ಇನ್ನು ಜಾರಿಯಾಗಿಲ್ಲ. ಈ ಬಗ್ಗೆ ಇದೀಗ ಕಾಂಗ್ರೆಸ್ ಎಂಎಲ್ಸಿಯಾಗಿರುವ ಬಿ.ಕೆ.ಹರಿಪ್ರಸಾದ್ ವಿಚಾರ ತೆಗೆದಿದ್ದಾರೆ. ಸರ್ಕಾರ ಉರುಳಿದರು ಪರವಾಗಿಲ್ಲ ಎಂಬ ಮಾತುಗಳನ್ನಾಡಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ಜಾತಿಗಣತಿ ಜಾರಿ ವಿಚಾರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಇದೆ. ಆದರೆ‌ಜಾತಿಗಣತಿ ಜಾರಿಗೆ ಸರ್ಕಾರ ಯಾಕೆ ಚಿಂತೆ ಮಾಡುತ್ತಿದೆ. ಜಾರಿ ಮಾಡುವುದಕ್ಕೆ ಮೀನಾಮೇಷ ಎಣಿಸುತ್ತಿರುವುದೇಕೆ. ಮೊದಲು ಜಾತುಗಣತಿ ವರದಿಯನ್ನು ಜಾರಿಗೆ ತರಲಿ. ಜಾತಿ ಗಣತಿ ಜಾರಿಯಾದರೆ ಎಲ್ಲಾ‌ ಸಮುದಾಯದವರಿಗೂ ಅನುಕೂಲವಾಗಲಿದೆ. ಜಾತಿಗಣತಿಯಿಂದ ಸರ್ಕಾರ ಉರುಳುತ್ತದೆ ಎಂದಾರೆ ಹಾಗೆಯೇ ಆಗಲಿ. ರಾಹುಲ್ ಗಾಂಧಿ ಪ್ರಣಾಳಿಕೆಯಲ್ಲಿ ಗೌರವ ಇಟ್ಟುಕೊಂಡಿರುವವರು. ಈಗ ಅವರೇ ಜಾತಿ ಹಣತಿ ವರದಿ ಬಿಡುಗಡೆಗೆ ಬೆಂಬಲ ನೀಡಬೇಕು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಜಾತಿ ಗಣತಿ ವರದಿ ಉಲ್ಲೇಖಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಅದನ್ನೇ ಉಲ್ಲೇಖಿಸಿದ್ದರು. ಪ್ರಪಂಚವೇ ಬಿದ್ದು ಹೋದರೂ ಜಾತಿ ಗಣತಿ ವರದಿ ಜಾರಿಯಾಗಬೇಕೆಂದು ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಅದೇ ರೀತಿ ಪ್ರಪಂಚ ತಲೆಕೆಳಗಾದರೆ ಆಗಲಿ, ಸರ್ಕಾರ ಬಿದ್ದು ಹೋದರೇ ಹೋಗಲಿ. ಯಾಕೆ ಹೆದರಬೇಕು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

Advertisement

 

ಜಾತಿಗಣತಿ ಜಾರಿ ವಿಚಾರದಲ್ಲಿ ಸಿಮ ಸಿದ್ದರಾಮಯ್ಯ ಅವರು ಎಚ್ಚರಿಕೆಯ ಹೆಜ್ಜೆ ಇಡಬೇಕು. ಒಂದು ವರ್ಷ ಕಾಯುವುದು ಉತ್ತಮ ಎಂದು ಡಿಕೆ ಸುರೇಶ್ ಹೇಳಿದ್ದರು. ಇದಕ್ಕೂ ಬಿಕೆ ಹರಿಪ್ರಸಾದ್ ತಿರುಗೇಟು ನೀಡಿದ್ದು, ಜಾತಿಗಣತಿ ಜಾರಿ ವಿಚಾರ ನಮ್ಮ ಪ್ರಣಾಳಿಕೆಯಲ್ಲಿಯೇ ಇದೆ. ಡಿಕೆ ಸುರೇಶ್ ಅವರು ಪ್ರಣಾಳಿಕೆಯನ್ನು ತಿಳಿದುಕೊಂಡು ಮಾತನಾಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದೇ ಉತ್ತರಿಸಿದ್ದಾರೆ.

Advertisement
Tags :
bengaluruBK Hariprasadcaste censuschitradurgaGovernmentsuddionesuddione newsಚಿತ್ರದುರ್ಗಜಾತಿಗಣತಿ ಜಾರಿಬಿ.ಕೆ ಹರಿಪ್ರಸಾದ್ಬೆಂಗಳೂರುಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್ಸ್ಪೋಟಕ ಹೇಳಿಕೆ
Advertisement
Next Article