Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಾಂಬೆ ಮಿಠಾಯಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ : ಎಲ್ಲೆಲ್ಲಾ ಬ್ಯಾನ್..!

08:11 PM Feb 17, 2024 IST | suddionenews
Advertisement

 

Advertisement

ಬಾಂಬೆ ಮಿಠಾಯಿ, ಐಸ್ ಕ್ಯಾಂಡಿ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಹಳ್ಳಿಗಳ ಕಡೆಗಳಲ್ಲಿ ಪುಯ್ ಪುಯ್ ಅಂತ ಸೌಂಡ್ ಮಾಡಿಕೊಂಡು ಬಾಂಬೆ ಮಿಠಾಯಿ ಮಾರಿಕೊಂಡು ಬಂದರೆ, ಮಕ್ಕಳು ಓಡೋಡಿ ಹೋಗುತ್ತಾರೆ. ಈ ನಡವಳಿಕೆ ಈಗಲೂ ಏನು ನಿಂತಿಲ್ಲ. ಆದರೆ ಈಗ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ. ಬಾಂಬೆ ಮಿಠಾಯಿಯನ್ನು ನಾಲಿಗೆ ರುಚಿ ಎಂದುಕೊಂಡು ಸವಿದರೆ ಕ್ಯಾನ್ಸರ್ ರೋಗವನ್ನು ಸ್ವಾಗತಿಸಿದಂತೆಯೇ ಸರಿ ಎನ್ನುತ್ತಿವೆ ಸಂಶೋಧನೆಗಳು.

 

Advertisement

ಬಾಂಬೆ ಮಿಠಾಯಿಯ ಬಗ್ಗೆ ಗಿಂಡಿಯ ಸರ್ಕಾರಿ ಆಹಾರ ವಿಶ್ಲೇಷಣಾ ಪ್ರಯೋಗಾಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಕಾಟನ್ ಕ್ಯಾಂಡಿಯಲ್ಲಿ ಜವಳಿ ಬಣ್ಣ ಮತ್ತು ರಾಸಾಯನಿಕ ರೋಡೋಮಿನ್ ಬಿ ಪತ್ತೆಯಾಗಿದೆ. ಈ ಕೆಮಿಕಲ್ ಕ್ಯಾನ್ಸರ್ ರೋಗ ಬರುವುದಕ್ಕೆ ಸುಲಭವಾಗಿ ದಾರಿ ಮಾಡಿಕೊಡುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಈ ರೀತಿಯ ಕಲರ್ ಫುಲ್ ಕ್ಯಾಂಡಿ, ಮಿಠಾಯಿ ತಿನ್ನುವ ಮುನ್ನ ಎಚ್ಚರವಹಿಸುವುದು ಬಹಳ ಮುಖ್ಯವಾಗುತ್ತದೆ.

ಈಗಾಗಲೇ ಸಾಕಷ್ಟು ರೋಗ ಬರುವಂತ ಆಹಾರಗಳೇ ಜನರಿಗೆ ಸಿಗುತ್ತಿವೆ. ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗುತ್ತದೆ. ಆದರೆ ಅದೇ ಪ್ಲಾಸ್ಟಿಕ್ ಕವರ್ ನಲ್ಲಿ ಊಟವನ್ನು ಪಾರ್ಸಲ್ ತರಲಾಗುತ್ತದೆ. ಕೆಲವೊಂದು ಲೋಕಲ್ ಕಾಸ್ಮೆಟಿಕ್ ಗಳಿಂದಾನೂ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದೇ ಹೇಳಲಾಗುತ್ತದೆ. ಇದೀಗ ಬಾಂಬೆ ಮಿಠಾಯಿಂದ ಕ್ಯಾನ್ಸರ್ ಬರಯವ ಸಾಧ್ಯತೆಗಳಿವೆ ಎಂದು ಗೊತ್ತಾದ ಮೇಲೆ ತಮಿಳುನಾಡು ಸರ್ಕಾರ ಮಿಠಾಯಿಯನ್ನು ಬ್ಯಾನ್ ಮಾಡಿದೆ. ಹಾಗೇ ಪುದುಚೇರಿಯೂ ಜನರ ಆರೋಗ್ಯ ದೃಷ್ಠಿಯಿಂದ ಮಿಠಾಯಿಯನ್ನು ಬ್ಯಾನ್ ಮಾಡಲಾಗಿದೆ.

Advertisement
Tags :
banbengaluruBombayCarcinogenicchitradurgaCONTENTeverywheresuddionesuddione newssweetsಅಂಶಕ್ಯಾನ್ಸರ್ ಕಾರಕಚಿತ್ರದುರ್ಗಪತ್ತೆಬಾಂಬೆ ಮಿಠಾಯಿಬೆಂಗಳೂರುಬ್ಯಾನ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article