Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಗಳೂರಿನಲ್ಲಿ ಸೆರೆ ಹಿಡಿದ ಚಿರತೆ ಗುಂಡೇಟಿನಿಂದ ಸಾವು : ಅರಣ್ಯ ಕಾಯ್ದೆಯಲ್ಲಿ ಇದಕ್ಕೆ ಅನುಮತಿ ಇದ್ಯಾ..?

06:57 PM Nov 01, 2023 IST | suddionenews
Advertisement

 

Advertisement

ಬೆಂಗಳೂರು: ಸತತ ಮೂರು ದಿನಗಳಿಂದ ಜನರನ್ನು ಆತಂಕಕ್ಕೆ ಈಡು ಮಾಡಿದ್ದ ಚಿರತೆ ಗುಂಡೇಟಿಂದ ಸಾವನ್ನಪ್ಪಿದೆ. ಕೂಡ್ಲು ಗೇಟ್ ಬಳಿಯ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಸೆರೆಯಾಗಿತ್ತು. ಗುಂಡೇಟಿನಿಂದ ಸಾವನ್ನಪ್ಪಿದೆ ಎಂಬುದು ಖಚಿತವಾಗಿದೆ.

ಕಳೆದ ಐದು ದಿನದಿಂದ ಕೂಡ್ಲು ಗೇಟ್ ಬಳಿ ಓಡಾಡುತ್ತಿದ್ದ ಚಿರತೆ ಸಾವನ್ನಪ್ಪಿದೆ. ಗುಂಡೇಟು ತಗುಲಿದ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಯಿತು. ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗಲಿಲ್ಲ ಎಂದು ಸಿಸಿಎಫ್ ಅಧಿಕಾರಿ ಲಿಂಗರಾಜು ಸ್ಪಷ್ಟಪಡಿಸಿದ್ದಾರೆ.

Advertisement

ಗುಂಡು ಹೊಡೆದ ಕಾರಣಕ್ಕೆ ಚಿರತೆ ಸಾವನ್ನಪ್ಪಿದೆ. ಈ ಸಂಬಂಧ ಅರಣ್ಯ ಕಾಯ್ದೆಯಲ್ಲಿ ಇರುವ ಮಾಹಿತಿ ಬಗ್ಗೆ ಮಾತನಾಡಿರುವ ಅಧಿಕಾರಿ ಲಿಂಗರಾಜು, ಚಿರತೆ ಹಿಡಿಯುವುದು ಕಷ್ಟವಾದಾಗ ಮೇಲಾಧಿಕಾರಿಗಳಿಂದಾನೇ ಅನುಮತಿ ಪಡೆದಿದ್ದೇವೆ. ಸಿಬ್ಬಂದಿಗಳ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದಾಗ ಗುಂಡು ಹಾರಿಸಲು ಅರಣ್ಯ ಕಾಯ್ದೆಯಲ್ಲಿ ಅನುಮತಿ ಇದೆ. ಗುಂಡು ಹಾರಿಸಲು ನಾವೂ ಅನುಮತಿ ಪಡೆದಿದ್ದೆವು ಎಂದಿದ್ದಾರೆ. ಚಿರತೆಯನ್ನು ಹಿಡಿಯುವುದಕ್ಕೆ ಗುಂಡು ಹಾರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

Advertisement
Tags :
bengalurufeaturedsuddioneಅರಣ್ಯ ಕಾಯ್ದೆಚಿರತೆಬೆಂಗಳೂರುಸಾವು
Advertisement
Next Article