For the best experience, open
https://m.suddione.com
on your mobile browser.
Advertisement

ಅಕ್ಕಿ ಕೊರತೆಯಿಂದ ನೀಡುತ್ತಿದ್ದ ಹಣಕ್ಕೆ ಅಕ್ಟೋಬರ್/ನವೆಂಬರ್ ನಲ್ಲಿ ಬ್ರೇಕ್..!

09:27 PM Sep 30, 2023 IST | suddionenews
ಅಕ್ಕಿ ಕೊರತೆಯಿಂದ ನೀಡುತ್ತಿದ್ದ ಹಣಕ್ಕೆ ಅಕ್ಟೋಬರ್ ನವೆಂಬರ್ ನಲ್ಲಿ ಬ್ರೇಕ್
Advertisement

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ‌ ಬರುವುದಕ್ಕೂ ಮುನ್ನ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅಕ್ಕಿ ಕೊರತೆಯಿಂದಾಗಿ, ಐದು ಕೆಜಿ ಅಕ್ಕಿ, ಇನ್ನುಳಿ ಐದು ಕೆಜಿಗೆ ಹಣ ನೀಡುತ್ತಿದೆ. ಇದೀಗ ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ಬಳಿಕ ಆ ಹಣಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ‌.

Advertisement

ಈಗಾಗಲೇ ತೆಲಂಗಾಣದ ಜೊತೆಗೆ ಮಾತುಕತೆ‌ ನಡೆದಿದೆ. ಅಲ್ಲಿಂದ ಅಕ್ಕಿ‌ ಖರೀದಿ ಮಾಡಲು ನಿರ್ಧಾರ ಮಾಡಿ ಆಗಿದೆ. ಈಗಾಗಲೇ ಅಲ್ಲಿನ ಸರ್ಕಾರದ ಜೊತೆಗೆ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿದ್ದಾರೆ. ಹೀಗಾಗಿ ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ಹತ್ತು ಕೆಜಿ ಅಕ್ಕಿ ಕೊಡುವುದಕ್ಕೆ ನಿರ್ಧಾರ ಮಾಡಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಮುನಿಯಪ್ಪ, ಅಕ್ಟೋಬರ್ ತಿಂಗಳಿನಲ್ಲಿಯೇ ಅನ್ನಭಾಗ್ಯ ಯೋಜನೆಗೆ ಪೂರ್ಣಪ್ರಮಾಣದಲ್ಲಿ ಅಕ್ಕಿ ನೀಡಲು ಕ್ರಮವಹಿಸಲಾಗುತ್ತಿದೆ. ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ಶೀಘ್ರವೇ ಅಕ್ಕಿ ಪೂರೈಕೆ ಮಾಡಲಾಗುತ್ತದೆ. ಬರ ಸನ್ನಿವೇಶವಿದ್ದರೂ, ಮುಂದೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ‌.

Advertisement

ಇಷ್ಟು ದಿನ ಅಕ್ಕಿಯ ಬದಲಿಗೆ ಒಬ್ಬೊಬ್ಬರ ಖಾತೆಗೆ 170 ರೂಪಾಯಿ ಅಂತೆ ಹಣ ನೀಡಲಾಗುತ್ತಿತ್ತು. ಹಣದ ಬದಲು ಅಕ್ಕಿಯನ್ನೇ ನೀಡಬೇಕು ಎಂದು ಬಿಜೆಪಿ ಕೂಡ ಆಗ್ರಹಿಸಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಎಲ್ಲಾ ಯೋಜನೆಯನ್ನು ಯಶಸ್ವಿ ಮಾಡಿದ್ದು, ಈಗ ಅಕ್ಕಿಭಾಗ್ಯ ಯೋಜನೆಯನ್ನು, ಎಲ್ಲಿಯೂ ವಿಫಲವಾಗದಂತೆ ನೋಡಿಕೊಳ್ಳಲು, ಕೊಟ್ಟ ಮಾತಿನಂತೆ ಅಕ್ಕಿಯನ್ನೇ ನೀಡಲು ತಯಾರಿ ನಡೆಸಿದೆ. ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಒಬ್ಬರಿಗೆ ಹತ್ತು ಕೆಜಿಯಂತೆ ಅಕ್ಕಿ ನೀಡಲಿದ್ದಾರೆ.

Tags :
Advertisement