For the best experience, open
https://m.suddione.com
on your mobile browser.
Advertisement

5, 8, 9, 11 ತರಗತಿ ಬೋರ್ಡ್ ಪರೀಕ್ಷೆಗೆ ಮತ್ತೆ ಬ್ರೇಕ್..!

02:48 PM Apr 08, 2024 IST | suddionenews
5  8  9  11 ತರಗತಿ ಬೋರ್ಡ್ ಪರೀಕ್ಷೆಗೆ ಮತ್ತೆ ಬ್ರೇಕ್
Advertisement

ನವದೆಹಲಿ: ಶಾಲಾ‌ ಮಕ್ಕಳಿಗೆ ಸುಪ್ರೀಂ ಕೋರ್ಟ್ ಗೊಂದಲಕ್ಕೀಡು ಮಾಡಿದೆ. ಈಗಾಗಲೇ 5, 8, 9, 11 ತರಗತಿ‌ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸಬಹುದು ಎಂದು ಅನುಮತಿ ನೀಡಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡಿದೆ. ಇದು ಮಕ್ಕಳಿಗೆ ಮತ್ತಷ್ಟು ಟೆನ್ಶನ್ ಹೆಚ್ಚು ಮಾಡಿದೆ.

Advertisement

ಈಗಾಗಲೇ 5, 8, 9, 11 ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಚೆ ಮುಗಿದಿದೆ. ಫಲಿತಾಂಶ ಹೊರ ಬೀಳಬೇಕಿತ್ತು. ಆದರೆ ಇದೇ ಸಮಯದಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶದ ತನಕ ಯಾವುದೇ ಶಾಲೆಗಳು ಫಲಿತಾಂಶವನ್ನು ಪ್ರಕಟಿಸಬಾರದು ಎಂದು ಆದೇಶ ನೀಡಿದೆ. ಜಸ್ಟೀಸ್ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ನೇತೃತ್ವದ ಪೀಠದಿಂದ ಈ ಆದೇಶ ನೀಡಲಾಗಿದೆ.

Advertisement

ಖಾಸಗಿ ಶಾಲಾ ಒಕ್ಕೂಟಗಳು 5, 8, 9, 11 ತರಗತಿಗಳಿಗೆ ಬೋರ್ಡ್ ಪರೀಕ್ಷೆ ಬೇಡ ಎಂದು ಮನವಿ ಮಾಡಿತ್ತು. ಈ ಸಂಬಂ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಹೈಕೋರ್ಟ್ ನಲ್ಲೆರ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೀಗ ಸುಪ್ರೀಂ ಕೋರ್ಟ್ ಹೈಕೋರ್ಟ್ಆದೇಶಕ್ಕೆ ತಡೆ ನೀಡಿದ್ದು, ಫಲಿತಾಂಶಕ್ಕೂ ತಡೆ ನೀಡಿದೆ.

ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶದಿಂದ ಮಕ್ಕಳು ಟೆನ್ಶನ್ ಆಗಿದ್ದಾರೆ. ಫಲಿತಾಂಶ ತಡೆ ಹಿಡಿದಿರುವುದು ಪೋಷಕರಿಗೂ ಆತಂಕವಾಗಿದೆ. ಮುಂದಿನ ಆದೇಶದವರೆಗೂ ತಡೆಹಿಡಿಯಲಾಗಿದೆ. ಮುಂದಿನ ಆದೇಶದಲ್ಲಿ ಯಾವ ರೀತಿಯ ತೀರ್ಪು ಬರಬಹುದು ಎಂಬುದನ್ನು ಕಾದು ನೋಡಬೇಕಿದೆ.

Tags :
Advertisement