For the best experience, open
https://m.suddione.com
on your mobile browser.
Advertisement

ಪಡಿತರ ಸಿಗದೆ BPL ಕಾರ್ಡುದಾರರು ಕಂಗಾಲು : ಇಷ್ಟೊಂದು ತಡವಾಗುವುದಕ್ಕೆ ಕಾರಣವೇನು..?

05:19 PM Oct 25, 2024 IST | suddionenews
ಪಡಿತರ ಸಿಗದೆ bpl ಕಾರ್ಡುದಾರರು ಕಂಗಾಲು   ಇಷ್ಟೊಂದು ತಡವಾಗುವುದಕ್ಕೆ ಕಾರಣವೇನು
Advertisement

Advertisement

ಬಿಪಿಎಲ್ ಕಾರ್ಡು ಹೊಂದಿರುವವರು ಪ್ರತಿ ತಿಂಗಳು ಸರ್ಕಾರದಿಂದ ಸಿಗುವ ಅಕ್ಕಿಗಾಗಿಯೇ ಕಾಯುತ್ತಿರುತ್ತಾರೆ. ಇದರಿಂದ ಎಷ್ಟೋ ಜನರ ಹೊಟ್ಟೆ ತುಂಬುತ್ತದೆ. ಆದರೆ ಅದ್ಯಾಕೋ ಏನೋ ಈ ಬಾರಿ ಪಡಿತರ ಬಡವರ ಕೈಗೆ ಸಿಕ್ತಿಲ್ಲ. ನ್ಯಾಯಬೆಲೆ ಅಂಗಡಿ ಮುಂದೆ ನಿಂತು ಕಾದು ಕಾದು ಸುಸ್ತಾಗಿ ಜನ ವಾಪಾಸ್ ಹೋಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸರ್ವರ್ ಸಮಸ್ಯೆ ಎನ್ನಲಾಗುತ್ತಿದೆ.

Advertisement

ಪ್ರತಿ ತಿಂಗಳು 10-15ನೇ ತಾರಿಖಿಗೆ ಪಡಿತರ ವಿತರಣೆಯಾಗುತ್ತಿತ್ತು. ಆದರೆ ಈ ಬಾರಿ ತಿಂಗಳು ಕಳೆಯುವುದಕ್ಕೆ ಬಂದರೂ ಶೇಕಡ 5-10 ರಷ್ಟು ಮಾತ್ರ ವಿತರಣೆಯಾಗಿದೆ. ರಾಜ್ಯ ಸರ್ಕಾರದ ಸುಮಾರು 30 ಇಲಾಖೆಗಳು ಆಡಳಿತ ದೃಷ್ಟಿಯಿಂದ ಒಂದೇ ವೆಬ್ಸೈಟ್ ಬಳಕೆ ಮಾಡುತ್ತಿದ್ದವು. ಇದರಿಂದ ಸಮಸ್ಯೆಯಾಗುತ್ತಿದ್ದ ಕಾರಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ತನ್ನದೇ ಆದ ಪ್ರತ್ಯೇಕ ತಂತ್ರಾಂಶವನ್ಬು ತೆರೆದಿತ್ತು.ವಾದರಿಂದಾನೇ ಆಹಾರ ಧಾನ್ಯ ಸರಬರಾಜು ಮಾಡಲಾಗುತ್ತಿತ್ತು. ಈ ಮೊದಲು ಪಡಿತರ ನೀಡುವಾಗ ಒಟಿಪಿ ಪಡೆದು ವಿತರಣೆ ಮಾಡಲಾಗುತ್ತಿತ್ತು. ಅದು ಫಾಸ್ಟ್ ಆಗಿ ವರ್ಕ್ ಆಗ್ತಾ ಇತ್ತು. ಈಗ ಬೆರಳು ಇಟ್ಟು ಪಡಿತರ ವಿತರಣೆ ಮಾಡುತ್ತಿದೆ. ಇದರಿಂದ ಸಾಕಷ್ಟು ಸರ್ವರ್ ಸಮಸ್ಯೆ ಎದುರಿಸುವಂತೆ ಆಗಿದೆ.

ಮಳೆ ಬೇರೆ ನಿಲ್ಲದೆ ಕಾಡುತ್ತಿದೆ. ಪಡಿತರ ತರಲು ಹೋದವರು ಮಳೆಯಲ್ಲಿಯೇ ನಿಂತು ಕಾಯಬೇಕಾದ ಸ್ಥಿತಿ ಎದುರಾಗಿದೆ. ಸರ್ವರ್ ಸಮಸ್ಯೆಯಿಂದ ಧಾರವಾಡ, ಬಳ್ಳಾರಿ, ಹಾವೇರಿ, ಚಾಮರಾಜನಗರ, ಬೀದರ್, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬಕ್ಕೂ ಪಡಿತರ ಸಿಗುವುದು ಅನುನಾನವಾಗಿದೆ. ಬೆಂಗಳೂರು ಹಾಗೂ ಗ್ರಾಮಾಂತರ ಭಾಗದಲ್ಲಿ ಪಡಿತರ ಹಂಚಿಕೆ ನಿಧಾನಗತಿಯಲ್ಲಿ ಸಾಗಿದೆ.

Tags :
Advertisement