For the best experience, open
https://m.suddione.com
on your mobile browser.
Advertisement

ಅಣ್ಣಾವ್ರ ಹಾಡುಗಳನ್ನಾಡುತ್ತಿದ್ದ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು : ಈಗ ಹೇಗಿದ್ದಾರೆ..?

12:50 PM Oct 01, 2024 IST | suddionenews
ಅಣ್ಣಾವ್ರ ಹಾಡುಗಳನ್ನಾಡುತ್ತಿದ್ದ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು   ಈಗ ಹೇಗಿದ್ದಾರೆ
Advertisement

ನಸೀಮ್, ರಾಜಾ ಬಾಬು, ಪಾಟ್ನರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಖ್ಯಾತಿ ಪಡೆದಿದ್ದ ಬಾಲಿವುಡ್ ನಟ ಗೋವಿಂದ ಅವರ ಕಾಲಿಗೆ ಗುಂಡೇಟು ಬಿದ್ದಿದೆ. ಬೆಳಗಿನ ಜಾವ 5 ಗಂಟೆಗೆ ಈ ಘಟನೆ ನಡೆದಿದೆ. ತಮ್ಮದೇ ರಿವಾಲ್ವರ್ ನಿಂದ ಗುಂಡೇಟು ತಗುಲಿದೆ. ಈ ನಟನನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Advertisement

ಗೋವಿಂದ ಅವರು ತಮ್ಮದೇ ಹೆಸರಿನಲ್ಲಿ ಪರವಾನಗಿ ಪಡೆದುಕೊಂಡು ರಿವಾಲ್ಚರ್ ಇಟ್ಟುಕೊಂಡಿದ್ದರು. ಇಂದು ಬೆಳಗ್ಗೆ ರಿವಲ್ವರ್ ಸ್ವಚ್ಛಗೊಳಿಸುತ್ತಿದ್ದಾಗ, ಗುಂಡೇಟು ಮಿಸ್ ಆಗಿ ಬಿದ್ದಿದೆ. ವೈದ್ಯರು ನಟನ ಕಾಲಿನಿಂದ ಗುಂಡನ್ನು ತೆಗೆದಿದ್ದಾರೆ. ನಟನಿಗೆ ಗುಂಡೇಟು ತಗುಲಿರುವ ವಿಚಾರ ತಿಳಿದು ಅಭಿಮಾನಿಗಳು ಆತಂಕದಲ್ಲಿದ್ದರು. ಇದೀಗ ಚೇತರಿಸಿಕೊಂಡಿರುವ ನಟ ಗೋವಿಂದ, ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

'ನಿಮ್ಮ ಆಶೀರ್ವಾದ, ತಂದೆ ತಾಯಿಯ ಆಶೀರ್ವಾದ, ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬೆಳಗ್ಗೆ ಗುಂಡು ಬಿದ್ದಿತ್ತು. ಈಗ ಅದನ್ನು ತೆಗೆಯಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು ಎಂದಿದ್ದಾರೆ. ನಟನ ಮಾತು ಕೇಳಿ ಅಭಿಮಾನಿಗಳು ನಿರಾಳರಾಗಿದ್ದಾರೆ.

Advertisement

ಗೋವಿಂದ ಅವರು ಇಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳುತ್ತಿದ್ದರು. ಗುಂಡಿನ ಶಬ್ದ ವರದಿಯಾದ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಗೋವಿಂದ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಕೂಡ ಪ್ರಾರ್ಥನೆ ಮಾಡಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲ ಅನೇಕ ಸೆಲೆಬ್ರೆಟಿಗಳು ಗೋವಿಂದ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ‌.

Advertisement

Advertisement
Tags :
Advertisement