Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎತ್ತಿಕಟ್ಟುತ್ತಿರುವ ಬಿಜೆಪಿಯವರದ್ದು ಮನೆ ಮುರುಕ ರಾಜಕೀಯ : ಮೂಡಾ ಹಗರಣ ಆರೋಪಕ್ಕೆ ಸಿದ್ದರಾಮಯ್ಯ ಆಕ್ರೋಶ

06:26 PM Jul 26, 2024 IST | suddionenews
Advertisement

ಬೆಂಗಳೂರು: ಮೂಡಾ ಹಗರಣ ಸಂಬಂಧ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೇನೆ ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರು ಈಗಾಗಲೇ ಸಾಕಷ್ಟು ಬಾರಿ ಕ್ಲಾರಿಟಿ ನೀಡಿದ್ದಾರೆ. ಈಗ ಮತ್ತೊಮ್ಮೆ ಮೂಡಾ ಹಗರಣದ ಬಗ್ಗೆ ಕ್ಲಾರಿಟಿ ನೀಡಿದ್ದು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಇಪ್ಪತ್ತು ವರ್ಷಗಳಿಂದ ಯಾವುದೇ ಆಕ್ಷೇಪ ಎತ್ತದ ವ್ಯಕ್ತಿಗಳನ್ನು ಎತ್ತಿ ಕಟ್ಟಿ ಹಕ್ಕುದಾರ ಎಂದು ಹೇಳಿ ರಾಜಕೀಯ ನಡೆಸುತ್ತಿರುವ ಬಿಜೆಪಿಯವರದ್ದು ಮನೆ ಮುರುಕ ರಾಜಕೀಯ. ಮೂಡಾ ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಎರಡು ಸೇರಿಕೊಂಡು ನನ್ನ ಜೀವಮಾನದಲ್ಲಿಯೇ ಕಾಣದಷ್ಟು ಕೆಟ್ಟ ರಾಜಕಾರಣವನ್ನು ಮಾಡುತ್ತಿವೆ.ಕರ್ನಾಟಕದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದೇ ನಿಜವಾಗುತ್ತದೆ ಎಂಬ ಹಿಟ್ಲರ್ ವಾದಿ ಹಾಗೂ ಭಾರತದ ಸಂದರ್ಭದಲ್ಲಿ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಅದನ್ನು ನಮ್ಮ ರಾಜ್ಯದಲ್ಲಿ ಪ್ರತಿಪಾದಿಸುತ್ತಿದ್ದಾರೆ. ಈ ಹಿಂದೆ ದೇವರಾಜ್ ಅರಸರ ವಿಚಾರದಲ್ಲೂ ಹಿಂಗೆ ಆಗಿತ್ತು.

ಅಷ್ಟೇ ಯಾಕೆ ಧರ್ಮಸಿಂಗ್ ಅವರ ವಿಚಾರದಲ್ಲೂ ಹೀಗೆ ಆಗಿತ್ತು. ಅದಕ್ಕೂ ಮೊದಲು ಕಲ್ಯಾಣದ ಬಿಜ್ಜಳನನ್ನು ಇದೇ ಪೇಶ್ವೆ ಮನಸ್ಥಿತಿಯ ಜನರೇ ಕೊಲೆ ಮಾಡಿದ್ದರು. ಈಗ ನನ್ನ ವಿಚಾರಕ್ಕೂ ಅದೇ ಆಗುತ್ತಿದೆ. ನನ್ನ ವಿಚಾರಕ್ಕೂ ಬಂದಿದ್ದೀರಿ. ಅಡ್ಡಿ ಇಲ್ಲ ಬನ್ನಿ, ಬಂದಿದ್ದು ಒಳ್ಳೆಯದ್ದೇ ಆಯಿತು. ರಾಜ್ಯದ ಜನರು ಇದನ್ನು ನೋಡುತ್ತಿದ್ದಾರೆ. ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೇ ಮಾಡಬಾರದೆಂಬ ನಿಲುವು ಇವರದ್ದು ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

Advertisement
Tags :
bengaluruBJP's upstart politicschitradurgahome invasionMuda scam allegationSiddaramaiahsuddionesuddione newsಚಿತ್ರದುರ್ಗಬಿಜೆಪಿಬೆಂಗಳೂರುಮನೆ ಮುರುಕ ರಾಜಕೀಯಮೂಡಾ ಹಗರಣ ಆರೋಪಸಿದ್ದರಾಮಯ್ಯ ಆಕ್ರೋಶಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article