For the best experience, open
https://m.suddione.com
on your mobile browser.
Advertisement

ಕೋಲಾರ ಜನತೆಯ 'ಕೈ'ಗೆ ಚಿಪ್ಪು : ಬಿಜೆಪಿಯಿಂದ ಪ್ರಶ್ನೆಗಳ ಸುರಿಮಳೆ

12:05 PM Dec 28, 2023 IST | suddionenews
ಕೋಲಾರ ಜನತೆಯ  ಕೈ ಗೆ ಚಿಪ್ಪು   ಬಿಜೆಪಿಯಿಂದ ಪ್ರಶ್ನೆಗಳ ಸುರಿಮಳೆ
Advertisement

Advertisement
Advertisement

ಬೆಂಗಳೂರು: ಕೋಲಾರದ ವಿಚಾರಕ್ಕೆ ಬಿಜೆಪಿ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಟ್ವೀಟ್ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದೆ. ಕೋಲಾರ ಜನತೆಯ "ಕೈ"ಗೆ ಚಿಪ್ಪು ಕೊಟ್ಟು, ಈಗ ಚುನಾವಣೆಗಾಗಿ ಅವರ ಕಾಲು ಹಿಡಿಯಲು ಹೊರಟಿರುವ ಸಿಎಂ @siddaramaiah ಅವರೇ, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ..!

Advertisement

Advertisement

▪️ಕೋಲಾರದ ಶಾಸಕರಿಗೆ ಮಂತ್ರಿಗಿರಿ ನೀಡಲಿಲ್ಲ ಏಕೆ?
▪️ಜಿಲ್ಲೆಯ ರೈತರ ಹಾಲಿಗೆ ಇನ್ನೂ ₹7 ಸಬ್ಸಿಡಿ ನೀಡಿಲ್ಲ ಏಕೆ?
▪️ಮಾವು ಬೆಳೆಗಾರರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ ಏಕೆ?
▪️ಸಿಎಂ ಆದ ತಕ್ಷಣವೇ ಜಿಲ್ಲೆಯನ್ನು ಜಿಹಾದಿಗಳಿಗೆ ಅಡವಿಟ್ಟಿದ್ದೇಕೆ?
▪️ಶಾಂತಿ ಆವರಿಸಿದ್ದ ಕೋಲಾರದಲ್ಲಿ ಅಶಾಂತಿ ಸೃಷ್ಟಿಸಿದ್ದೇಕೆ?
▪️ಕೋಲಾರದಲ್ಲಿ ರೈತ ಮಾಲ್ ಸ್ಥಾಪನೆ ಮಾಡುವುದು ಯಾವಾಗ?

ಸಿದ್ದರಾಮಯ್ಯರವರೇ, ಚಿನ್ನದ ಭೂಮಿ ಕೋಲಾರಮ್ಮನ ನಾಡಿಗೆ ಕಾಲಿಡುವುದಕ್ಕೆ ಯಾವ ನೈತಿಕತೆ ಉಳಿಸಿಕೊಂಡಿದ್ದೀರಿ. ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ..!? ಎಂದು ಟ್ವೀಟ್ ಮಾಡಿದೆ.

ಯುವನಿಧಿಯ ಬಗ್ಗೆಯೂ ಟ್ವೀಟ್ ಮಾಡಿ, ಯುವಜನತೆಗೆ ಸಿದ್ದರಾಮಯ್ಯ ಸರ್ಕಾರ ವಂಚಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿಯಲ್ಲಿ ಪದವಿ ಮತ್ತು ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಮಾಸಿಕ ತಲಾ 3 ಸಾವಿರ ಹಾಗೂ 1500 ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಆದರೆ ಇಂದು 2022-23 ರಲ್ಲಿ ತೇರ್ಗಡೆ ಹೊಂದಿದ 3 ರಿಂದ 4 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಯುವನಿಧಿ ಬಿಡುಗಡೆ ಮಾಡುವ ಮೂಲಕ ತಾರಮ್ಯದ ನಡೆ ಪ್ರದರ್ಶಿಸುತ್ತಿದೆ‌ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement
Tags :
Advertisement