ಜನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ : ದೆಹಲಿಯಲ್ಲಿ ರೇಣುಕಾಚಾರ್ಯ ಹೇಳಿದ್ದೇನು..?
ದೆಹಲಿ: ರಾಜ್ಯಾಧ್ಯಕ್ಷರ ಬದಲಾವಣೆ ಜನವರಿ ಸಮಯಕ್ಕೆ ಆಗುತ್ತದೆ ಎಂದು ಈಗಾಗಲೇ ಬಿಜೆಪಿಯಲ್ಲಿ ಇರುವವರೇ ಹೇಳುತ್ತಿದ್ದಾರೆ. ಕುಮಾರ ಬಂಗಾರಪ್ಪ ಅವರು ಈ ಬಗ್ಗೆ ಮಾತಾಡಿದ್ದಾರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ ಅವರು, ಹೈಕಮಾಂಡ್ ಹೇಳಿರುವಾಗ ನಿಂದೇನಪ್ಪ ಎಂದು ಗರಂ ಆಗಿದ್ದಾರೆ.
ಭಾರತೀಯ ಜನತಾ ಪಾರ್ಟಿಗೆ ಬಂದು ಎಷ್ಟು ವರ್ಷ ಆಯ್ತು. ರಾಜ್ಯಾಧ್ಯಕ್ಷರನ್ನ ನೇಮಕ ಮಾಡಿದ್ದು ನಾವ್ಯಾರು ಅಲ್ಲ, ಯಡಿಯೂರಪ್ಪ ಅವರು ಅಲ್ಲ. ನರೇಂದ್ರ ಮೋದಿಯವರು, ಅಮಿತಾ ಶಾಜಿ ಅವರು, ಜೆಪಿ ನಡ್ಡಾ ಅವರು, ಸಂತೋಷ್ ಜೀ ಅವರು. ಮೊನ್ನೆ ತಾನೇ ಕರ್ನಾಟಕಕ್ಕೆ ಬಂದಂತ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಲ್ಲಿ ಒಬ್ಬರಾದ ಅಗರ್ ವಾಲ್ ಅವರು ಏನು ಹೇಳಿದ್ದಾರೆ. ವಿಜಯೇಂದ್ರ ಅವರು ಮಜಭೂತವಾಗಿ ಸಂಘಟನೆ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದಿದ್ದಾರೆ. ಅವರೇ ಹೇಳಿದ ಮೇಲೆ ನಿಂದೇನಪ್ಪ ಕೆಲಸ.
ಒಂದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು ಯಡಿಯೂರಪ್ಪ ಹಾಗೂ ಬಿಜೆಪಿಯ ಆಶೀರ್ವಾದ. ಸೊರಬದಲ್ಲಿ ಸ್ಥಳೀಯ ಮುಖಂಡರನ್ನ, ಕಾರ್ಯಕರ್ತರನ್ನ ಪಕ್ಷದ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರನ್ನ ನೇಮಕ ಮಾಡಿದ್ದಕ್ಕೆ ನೀನು ಪರ್ಯಾಯವಾಗಿ ಒಬ್ಬ ಅಧ್ಯಕ್ಷರನ್ನ ನೇಮ ಮಾಡಿಕೊಂಡೆ. ಸೊರಬದಲ್ಲಿಯೇ ನೀನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಸ್ವಯಂಕೃತ ಅಪರಾಧದಿಂದ ಸೋತೆ. ಆದರೆ ಕೆಲವೊಂದಿಷ್ಟು ಮಂದಿ ಜೊತೆ ಸೇರಿಕೊಂಡು ಏನೇನು ಮಾತಾಡ್ತೀಯ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದ ಅಧ್ಯಕ್ಷರು ಒಳ್ಳೆ ಕೆಲಸ ಮಾಡಿದ್ದಾರೆ. ಬದಲಾವಣೆಯ ಪ್ರಶ್ನೆಯೇ ಇಲ್ಲ. ನೇಮಕವಾಗಿ ಇನ್ನು ಒಂದು ವರ್ಷವಾಗಿಲ್ಲ. ಭ್ರಷ್ಟಾಚಾರದ ವಿರುದ್ಧ ಯಶಸ್ವುಯಾಗಿ ಹೋರಾಟ ಮಾಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರ ಪಾದಯಾತ್ರೆಯ ಫಲ. ವಿಜಯೇಂದ್ರ ಬದಲಾವಣೆಯಾಗುತ್ತದೆ ಎಂಬುದು ತಿರುಕನ ಕನಸು ಎಂದು ತಿರುಗೇಟು ನೀಡಿದ್ದಾರೆ.