Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜೆಡಿಎಸ್ ಬೆಂಬಲವಿಲ್ಲದೆ ಬಿಜೆಪಿ ಪಾದಯಾತ್ರೆ : ವಿಜಯೇಂದ್ರಗೆ ಅಮಿತ್ ಶಾ ಹೇಳಿದ್ದೇನು..?

12:24 PM Aug 01, 2024 IST | suddionenews
Advertisement

 

Advertisement

ನವದೆಹಲಿ: ಮೂಡಾ ಹಗರಣವನ್ನು ವಿರೋಧಿಸಿ, ಸಿಎಂ ಸಿದ್ದರಾಮಯ್ಯ ಅವರ‌ ರಾಜೀನಾಮೆಗೆ ಒತ್ತಾಯಿಸಿ, ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ. ಆದರೆ ಈ ಪಾದಯಾತ್ರೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿತ್ತು. ಜೆಡಿಎಸ್ ‌ನಾಯಕರು ಈ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂಬುದನ್ನು ಹೇಳಿದ್ದರು. ಇದು ಬಿಜೆಪಿ ನಾಯಕರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿತ್ತು. ಆದರೆ ಈಗ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದು ಹೇಳುತ್ತಿರುವುದು ಮೈತ್ರಿ ವಲಯದಲ್ಲಿ ಶಾಕಿಂಗ್ ಎನಿಸಿದೆ. ಚುನಾವಣೆ ಆದ ಮೇಲೂ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮುಂದುವರೆಸಿದೆ. ಕುಮಾರಸ್ವಾಮಿ ಕೇಂದ್ರ ಸಚುವರಾಗಿ ಮೋದಿ ಸಂಪುಟ ಸೇರಿದ್ದಾರೆ. ಹೀಗಿರುವಾಗ ಬಿಜೆಪಿ ನಡೆಯುವ ಹಾದಿಯಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕುತ್ತಾರೆ ಎಂದೇ ಹೇಳಲಾಗುತ್ತಿತ್ತು. ಈಗ ದಿಢೀರನೇ ಪಾದಯಾತ್ರೆಯಿಂದ ಹಿಂದೆ ಸರಿದಿದೆ. ರಾಜ್ಯದಲ್ಲಿ ಪ್ರವಾಹ ಆಗುತ್ತಿದೆ. ಜನ ಸಂಕಷ್ಟಕ್ಕೆ ಸಿಲುಕಿರುವಾಗ ಪಾದಯಾತ್ರೆಗೆ ಜೆಡಿಎಸ್ ಬೆಂಬಲ‌ ನೀಡಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು.

Advertisement

ಆದರೆ ಜೆಡಿಎಸ್ ಬೆಂಬಲವಿಲ್ಲದೆ ಪಾದಯಾತ್ರೆಯನ್ನು ಸ್ಥಗಿತಗೊಳೊಸಿದರೆ ಬಿಜೆಪಿಗೆ ಮುಖಭಂಗವಾಗಲಿದೆ. ಸಿದ್ದರಾಮಯ್ಯ ಅವರಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ತನಕ ಹೋರಾಟ‌ ಮಾಡುತ್ತಿದ್ದಾರೆ. ಹೀಗಿರುವಾಗ ಪಾದಯಾತ್ರೆಯಿಂದ ಹಿಂದೆ ಸರಿಯುವುದಕ್ಕೆ ಹೇಗೆ ಸಾಧ್ಯ. ಈ ಎಲ್ಲಾ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ. ಹೈಕಮಾಂಡ್ ನಿಂದ ಪಾದಯಾತ್ರೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಈ ರೀತಿ ನಾವೂ ಸುಮ್ಮನೆ ಇದ್ದರೆ ಎಲ್ಲದಕ್ಕೂ ಹೆದರಿಸುತ್ತಲೇ ಇರುತ್ತಾರೆ. ಸಮಾರೋಪ ಸಮಾರಂಭಕ್ಕೆ‌ ನಾನು ಜೊತೆಗೆ ಇರುತ್ತೇನೆ ಎಂದು ಹುಮ್ಮಸ್ಸು ತುಂಬಿದ್ದಾರೆ ಎನ್ನಲಾಗಿದೆ.

Advertisement
Tags :
Amit ShahB. Y. VijayendrabengaluruBjpchitradurgajdspadayatresuddionesuddione newssupportಅಮಿತ್ ಶಾಚಿತ್ರದುರ್ಗಜೆಡಿಎಸ್ಪಾದಯಾತ್ರೆಬಿಜೆಪಿಬೆಂಗಳೂರುಬೆಂಬಲವಿಜಯೇಂದ್ರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article