Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೇರಳದಲ್ಲಿ ಖಾತೆ ತೆರೆದ ಬಿಜೆಪಿ : ನಟ ಸುರೇಶ್ ಗೋಪಿ ಮೊದಲ ಬಿಜೆಪಿ ಸಂಸದರಾಗಿ ಗೆಲುವು...!

06:23 PM Jun 04, 2024 IST | suddionenews
Advertisement

ಸುದ್ದಿಒನ್,  ತ್ರಿಶೂರ್, ಜೂ.4: ಮಲಯಾಳಂನ ಜನಪ್ರಿಯ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಪ್ರಭು ಅವರು ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

Advertisement

ಕೇರಳದ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುರೇಶ್ 75,079 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತ್ರಿಶೂರ್ ಕ್ಷೇತ್ರದಿಂದ ಅವರು ಒಟ್ಟು 4,09,239 ಮತಗಳನ್ನು ಪಡೆದು ಮೊದಲ ಸ್ಥಾನ ಪಡೆದಿದ್ದು, ಪ್ರತಿಸ್ಪರ್ಧಿ ಎಲ್‌ಡಿಎಫ್‌ನ ವಿಎಸ್ ಸುನೀಲ್ ಕುಮಾರ್ 3,34,160 ಮತಗಳನ್ನು ಪಡೆದು ಸೋತಿದ್ದಾರೆ. ಇದು ಕೇರಳದಲ್ಲಿ ಬಿಜೆಪಿಯ ಮೊದಲ ಗೆಲುವು ಮಾತ್ರವಲ್ಲದೆ ಸುರೇಶ್ ಗೋಪಿ ರಾಜ್ಯದಿಂದ ಆಯ್ಕೆಯಾದ ಮೊದಲ ಬಿಜೆಪಿ ಸಂಸದರೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಬಿಜೆಪಿ ಮೊದಲ ಬಾರಿಗೆ 1989 ರಲ್ಲಿ ತ್ರಿಶೂರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 5.35% ಮತಗಳಿಂದ ಸೋತಿತ್ತು. ಇದೇ ರೀತಿ ಮುಂದಿನ ಏಳು ಚುನಾವಣೆಗಳಲ್ಲಿ 2014 ರವರೆಗೆ ಮುಂದುವರೆಯಿತು. ಅಲ್ಲಿ ಬಿಜೆಪಿಯ ಮತ ಹಂಚಿಕೆ ಶೇ.10 ಮಾತ್ರ. ಆದರೆ 2019 ರಲ್ಲಿ ಸುರೇಶ್ ಗೋಪಿ ವೋಟ್ ಬ್ಯಾಂಕ್ ಅನ್ನು ತಲೆಕೆಳಗಾಗಿ ಮಾಡಿದರು. ಅವರ ರಾಜಕೀಯ ಪ್ರವೇಶವು ಸ್ಥಳೀಯ ಚುನಾವಣೆಗಳ ಲೆಕ್ಕಾಚಾರ ಗಮನಾರ್ಹ ಬದಲಾವಣೆಗಳನ್ನು ಕಂಡಿದೆ.

Advertisement

ಕೇರಳದ ತ್ರಿಶೂರ್ ಕ್ಷೇತ್ರದಿಂದ ಗೆದ್ದಿರುವ ಕುರಿತು ಮಲಯಾಳಂ ನಟ ಸುರೇಶ್ ಗೋಪಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, 'ನಾನು ಸಂಪೂರ್ಣ ಭಾವುಕನಾಗಿದ್ದೇನೆ. ಅತ್ಯಂತ ಅಸಾಧ್ಯವಾದದ್ದು ಅದ್ಭುತವಾಗಿ ಸಾಧ್ಯವಾಯಿತು. ಇದು 62 ದಿನಗಳ ಪ್ರಚಾರದ ಫಲಿತಾಂಶವಲ್ಲ. ‘ಕಳೆದ ಏಳು ವರ್ಷಗಳ ಭಾವನಾತ್ಮಕ ಶ್ರಮ’ ಎಂದು ಸಂತಸ ವ್ಯಕ್ತಪಡಿಸಿದರು.

Advertisement
Tags :
Actor Suresh GopiBJP opens accountfirst BJP MPKeralaKerlaLatest newsಕೇರಳಖಾತೆ ತೆರೆದ ಬಿಜೆಪಿಗೆಲುವುನಟ ಸುರೇಶ್ ಗೋಪಿಬಿಜೆಪಿ ಸಂಸದ
Advertisement
Next Article