ವಿಧಾನಪರಿಷತ್ ಚುನಾವಣೆಯಲ್ಲೂ ಸುಮಲತಾಗೆ ಕೈಕೊಟ್ಟ ಬಿಜೆಪಿ : ಟಿಕೆಟ್ ಮಿಸ್ಸಿಂಗ್..!
ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿಯೇ ಸುಮಲತಾಗೆ ಮಂಡ್ಯ ಟಿಕೆಟ್ ಮಿಸ್ ಆಗಿತ್ತು. ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಆದರೆ ಸುಮಲತಾಗೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ಆದ್ರೂ ಸಿಗಬಹುದು ಎಂಬ ನಿರೀಕ್ಷೆ ಇತ್ತು ಈಗ ಅದು ಸುಳ್ಳಾಗಿದೆ. ಜೂನ್ 13 ಕ್ಕೆ ವಿಧಾನಪರಿಷತ್ ಚುನಾವಣೆ ನಡೆಯಲಿದೆ.
ಇದೀಗ ಬಿಜೆಪಿ ವಿಧಾನಪರಿಷತ್ ಚುನಾವಣೆಗೆ ಟಿಕೆಟ್ ಘೋಷಣೆ ಮಾಡಿದ್ದು, ಮಾಜಿ ಸಚಿವ ಸಿ.ಟಿ. ರವಿ, ಎಂ.ಜಿ.ಮುಳೆ, ಎನ್.ರವಿಕುಮಾರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಸಭೆಯಲ್ಲಿರುವ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇನ್ನು ಸಿ.ಟಿ. ರವಿ ಅವರು ಇದೇ ಮೊದಲ ಬಾರಿಗೆ ವಿಧಾನಪರಿಷತ್ ಗೆ ಪ್ರವೇಶ ಮಾಡಲಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಗೆದ್ದರೆ ವಿಧಾನ ಪರಿಷತ್ ನ ವಿಪಕ್ಷ ನಾಯಕನ ಸ್ಥಾನ ತೆರವುಗೊಳ್ಳಲಿದೆ. ಮುಂದೆ ಸಿ.ಟಿ. ರವಿ ವಿಧಾನಪರಿಷತ್ ನ ವಿಪಕ್ಷ ನಾಯಕನನ್ನು ಮಾಡುವ ಸಾಧ್ಯತೆ ಇದೆ.
ಇನ್ನು ಒಬಿಸಿ ವರ್ಗದಲ್ಲಿ ಎನ್ ರವಿ ಕುಮಾರ್ ಅವರಿಗೆ ಎರಡನೇ ಬಾರಿಗೆ ಟಿಕೆಟ್ ನೀಡಲಾಗಿದ್ದು, ಈಗಾಗಲೇ ವಿಧಾನಪರಿಷತ್ ನ ವಿಪಕ್ಷ ಮುಖ್ಯ ಸಚೇತಕರಾಗಿದ್ದಾರೆ. ಮೂರನೇ ಟಿಕೆಟ್ ಅನ್ನು ಮರಾಠ ಸಮುದಾಯದ ಮುಳೆ ಅವರಿಗೆ ನೀಡಲಾಗಿದೆ. ಮುಳೆ ಅವರು ಬಸವ ಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಹಾಗೂ ಮರಾಠಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಆಗಿದ್ದಾರೆ. ಮುಳೆ ಅವರು ಈ ಮೊದಲು ಜೆಡಿಎಸ್ ನಲ್ಲಿದ್ದರು, ಕಳೆದ ಉಪ ಚುಣಾವಣೆಯಲ್ಲಿ ಬಿಜೆಪಿ ಸೇರಿದ್ದರು. ಮೂರು ಟಿಕೆಟ್ ಅನ್ನು ಹಂಚಲಾಗಿದ್ದು, ಸುಮಲತಾಗೆ ಪರಿಷತ್ ಟಿಕೆಟ್ ಕೂಡ ಮಿಸ್ ಆಗಿದೆ.