ಅಪರೂಪದ ಜ್ವರಕ್ಕೆ ತುತ್ತಾಗಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್ : ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!
ಬೆಂಗಳೂರು: ರಾಜಾಜಿನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರೂಪದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕಳೆದ ಕೆಲವು ದಿನಗಳಿಂದಾನೂ ತುಂಬಾನೇ ದಣಿದಿದ್ದರು. ಸದ್ಯಕ್ಕೆ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ.
ಕಳೆದ ಮುರ್ನಾಲ್ಕು ದಿನದ ಹಿಂದಷ್ಟೇ ತೀವ್ರ ಜ್ವರದಿಂದ ಬಳಲುತ್ತಿದ್ದ ಸುರೇಶ್ ಕುಮಾರ್ ಅವರನ್ನು ಕುಟುಂಬಸ್ಥರು ಸೇರಿ ಆಸ್ಪತ್ರೆಗೆ ಸೇರಿಸಿದ್ದರು. ಶೇಷಾದ್ರಿ ಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹಿರಿಯ ನಾಯಕ ಎಸ್. ಸುರೇಶ್‌ಕುಮಾರ್ ಅವರು ಕಳೆದ ತಿಂಗಳು ಬೆಂಗಳೂರಿನಿಂದ ತಿರುಪತಿಗೆ ಸೈಕಲ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಬೆಂಗಳೂರಿನಿಂದ ಮೈಸೂರಿಗೆ ನಡೆದ ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆಯಲ್ಲೂ ಸುರೇಶ್ ಕುಮಾರ್ ಅವರು ಒಂದು ದಿನ ಭಾಗಿಯಾಗಿದ್ದರು. ಇದಾದ ಬಳಿಕ ಕಳೆದ ತಿಂಗಳಿಂದ ಸುರೇಶ್ ಕುಮಾರ್ ಬಹಳ ಆಯಾಸಗೊಂಡಿದ್ದರು ಎನ್ನಲಾಗಿದೆ.
ಈ ಎಲ್ಲಾದರಿಂದ ಬಳಲುತ್ತಿದ್ದ ಸುರೇಶ್ ಕುಮಾರ್ ಅವರಿಗೆ ಜ್ವರ ಜಾಸ್ತಿಯಾಗಿದೆ. ಮೆದುಳಿಗೂ ಜ್ವರ ತಗುಲಿರುವ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ವೈದ್ಯರು ತಿಳಿಸಿದ್ದಾರೆ. ಆದಷ್ಟು ಬೇಗ ಹುಷರಾಗಿ ಬರಲೆಂದು ಅವರ ಹಿಂಬಾಲಕರು, ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕುಟುಂಬಸ್ಥರು ಜೊತೆಯಲ್ಲಿಯೇ ಇದ್ದು ನೋಡಿಕೊಳ್ಳುತ್ತಿದ್ದಾರೆ. ಅಪೋಲೋ ಆಸ್ಪತ್ರೆ ವೈದ್ಯರು ಸಾಕಷ್ಟು ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇದ್ದಕ್ಕಿದ್ದ ಹಾಗೇ ಜ್ವರ ಕಾಣಿಸಿಕೊಂಡು ತುಂಬಾನೇ ಸುಸ್ತಾಗಿದ್ದರು ಎಂದು ಅವರ ಜೊತೆಗೆ ಓಡಾಡಿದವರು ಹೇಳುತ್ತಿದ್ದಾರೆ. ಆರಂಭದ ಜ್ಚರದಲ್ಲಿಯೇ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಸುಸ್ತಾಗುವ ತನಕ ಓಡಾಟ ನಡೆಸಿದ್ದಾರೆ ಎನ್ನಲಾಗಿದೆ.