Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯ ಬಜೆಟ್ ಬಗ್ಗೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೊಗಳಿಕೆ

05:35 PM Feb 16, 2024 IST | suddionenews
Advertisement

 

Advertisement

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ಬಜೆಟ್ ಮಂಡನೆ ಮಾಡಿದ್ದಾರೆ. 2024-25 ಸಾಲಿನ ಬಜೆಟ್ ಮಂಡಿಸಿದ್ದು, ಇದನ್ನು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೊಗಳಿಕೆಯ ಮಾತನ್ನು ಆಡಿದ್ದಾರೆ.

 

Advertisement

ಬಜೆಟ್ ಬಗ್ಗೆ ಮಾತನಾಡಿದ ಎಸ್ ಟಿ ಸೋಮಶೇಖರ್, ಬಜೆಟ್ ನಲ್ಲಿ ಬೆಂಗಳೂರಿಗೆ ಸೀಮಿತವಾಗಿ ಮಾತನಾಡುವುದಾದರೆ ನಾವೂ ಏನೇನು ಬೇಡಿಕೆ ಇಟ್ಟಿದ್ದೆವೋ ಅದೆಲ್ಲವನ್ನು ಕೂಡ ಜಾರಿಗೆ ತಂದಿದ್ದಾರೆ. ಕಸದ ಘಟಕಗಳನ್ನು 100 ಪರ್ಸೆಂಟ್ ಶಿಫ್ಟ್ ಮಾಡಲೇಬೇಕು ಅನ್ನೋದು ನಮ್ಮ ಮನವಿ ಆಗಿತ್ತು. ಅದರಂತೆ ಕಸದ ಘಟಕಗಳನ್ನು ಶಿಫ್ಟ್ ಮಾಡಿದ್ದಾರೆ. ಮೆಟ್ರೋ ಕಾಮಗಾರಿಗಳನ್ನು ಮಾಡಯತ್ತಾ ಇದ್ದಾರೆಮ ಅದನ್ನು ನಮ್ಮ ಕ್ಷೇತ್ರಗಳಿಗೂ ವಿಸ್ತರಣೆ ಮಾಡಲಿದ್ದಾರೆ. ನಮ್ಮ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಮಾಡಲು ಕೇಳಿದ್ದೆವು. ಅದರಂತೆ 1700 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಬರೀ ಯಶವಂತಪುರ ಕ್ಷೇತ್ರ ಮಾತ್ರವಲ್ಲ ಬೆಂಗಳೂರಿನ 28 ಕ್ಷೇತ್ರಕ್ಕೂ ಇದು ಅನುಕೂಲವಾಗಲಿದೆ ಎಂದಿದ್ದಾರೆ.

ಬಜೆಟ್ ವಿಚಾರಕ್ಕೆ ಬಿಜೆಪಿ ನಾಯಕರು ಗರಂ ಆಗಿದ್ದನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದ್ದಾರೆ. ಬಿಜೆಪಿಯ ಶಾಸಕ ಎಸ್ ಟಿ ಸೋಮಶೇಖರ್ ಅವರೇ ನೀಡಿರುವ ಹೇಳಿಕೆಯನ್ನು ಪುನರುಚ್ಛಾರ ಮಾಡಿ, ಬಜೆಟ್ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಬಜೆಟ್ ಓದದೇ ಸಭಾತ್ಯಾಗ ಮಾಡಿದ್ದು ಸರಿಯಲ್ಲ. ಸಮಸ್ಯೆ ಇದ್ದರೆ ಚರ್ಚೆ ಮಾಡಲಿ. ಇವರು ಕನ್ನಡಿಗರ ಸೇವೆಗೆ ಇರೋದಾ ಅಥವಾ ಮೋದಿ ಸೇವೆಗೆ ಇರೋದಾ..? ಸೋಮಶೇಖರ್ ಅವರೇ ಬಜೆಟ್ ಗೆ ಜೈ ಎಂದಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹಾಗೂಸಚುವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿ ಉತ್ತರಿಸಿದ್ದಾರೆ.

Advertisement
Tags :
bengaluruBjpbudget 2024Chief Minister SiddaramaiahchitradurgaMLA ST SomashekharpraisesSiddaramaiahsuddionesuddione newsಚಿತ್ರದುರ್ಗಬಜೆಟ್ 2024ಬಿಜೆಪಿಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯಶಾಸಕ ಎಸ್. ಟಿ. ಸೋಮಶೇಖರ್ಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್ಹೊಗಳಿಕೆ
Advertisement
Next Article