ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಅಧಿಕಾರ ಬಿಜೆಪಿ, ಜೆಡಿಎಸ್.ನವರಿಗಿಲ್ಲ : ಪಿ.ಕೆ.ಪವಿತ್ರ
04:12 PM Sep 25, 2024 IST | suddionenews
Advertisement
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 25 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲದಿದ್ದರೂ ಕೇಂದ್ರ ಬಿಜೆಪಿ ಹಾಗೂ ಜೆಡಿಎಸ್ ನವರು ರಾಜನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪಿ.ಕೆ.ಪವಿತ್ರ ವಿರೋಧಿಗಳ ಷಡ್ಯಂತ್ರವನ್ನು ಖಂಡಿಸಿದ್ದಾರೆ.
Advertisement
ಮೂಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯನವರನ್ನು ಸಿಲುಕಿಸಲು ಕೇಂದ್ರ ಬಿಜೆಪಿ. ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿದೆ. ಸಿದ್ದರಾಮಯ್ಯನವರ ರಾಜಿನಾಮೆ ಕೇಳುವ ಅಧಿಕಾರ ಬಿಜೆಪಿ, ಜೆಡಿಎಸ್.ನವರಿಗಿಲ್ಲ ಎಂದು ಪಿ.ಕೆ.ಪವಿತ್ರ ವಿರೋಧಿಗಳನ್ನು ಎಚ್ಚರಿಸಿದ್ದಾರೆ.
Advertisement