For the best experience, open
https://m.suddione.com
on your mobile browser.
Advertisement

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ : ಕಾಂಗ್ರೆಸ್ ನಾಯಕರು ಏನಂದ್ರು..?

12:56 PM Dec 13, 2023 IST | suddionenews
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ   ಕಾಂಗ್ರೆಸ್ ನಾಯಕರು ಏನಂದ್ರು
Advertisement

Advertisement

ಬೆಳಗಾವಿ: ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಪ್ರತಿಭಟನೆಗೆ 25 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಪ್ರತಿಭಟನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಬಿಜೆಪಿ ನಾಯಕರಲ್ಲಿ ಒಮ್ಮತ ಇಲ್ಲ ಎಂಬುದನ್ನು ತೋರಿಸುತ್ತಾ ಇದೆ. ಶಾಸಕಾಂಗ ಪಕ್ಷದ ನಾಯಕರಾಗಿ ಅಶೋಕ್ ರನ್ನ ಆಯ್ಕೆ ಮಾಡಿದ್ದಾರೆ. ಅವರ ಧ್ವನಿ ಆಚಾರ, ವಿಚಾರ, ಸರ್ಕಾರ ತಪ್ಪು ಮಾಡಿದೆಯಾ, ಬರಗಾಲದ ಸಮಸ್ಯೆ ಇದೆ. ನಮ್ಮ ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವುದು, ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚೆ ಮಾಡುವುದು ಸೇರಿದಂತೆ ಒಳಗೆ ಕುಳಿತು ಚರ್ಚೆ ಮಾಡುವುದನ್ನು ಬಿಟ್ಟು, ಪ್ರತಿಭಟನೆ ಮಾಡಿದರೆ ಯಾರ್ರೀ ಕೇಳುತ್ತಾರೆ. ಅವರು ಎಷ್ಟು ದುರ್ಬಲ  ಎಂಬುದಕ್ಕೆ ಇದು ಒಂದು ಕಾರಣ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿಸಲಾಗಿದೆ ಎಂದಿದ್ದಾರೆ.

Advertisement

ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದ. ಯಾವುದರ ವಿರುದ್ಧ ಮಾಡುತ್ತಾರೆ‌. ಇವರ ಆದ್ಯತೆ ಏನು.  ಇಲ್ಲಿ ಬನ್ನಿ ಚರ್ಚೆ ಮಾಡುವುದಕ್ಕೆ ರೆಡಿ ಇದ್ದೀವಿ. ಸರ್ಕಾರ ಒಳಗೆ ಕುಳಿತಿದೆ. ಯಾರ ವಿರುದ್ಧ ಕುಳಿತುಕೊಳ್ಳುತ್ತಾರೆ ಯಡಿಯೂರಪ್ಪ ಅವರು. ಯತ್ನಾಳ್ ಅವರ ವಿರುದ್ಧವಾ..? ಬಿಜೆಪಿಯಲ್ಲಿ ಬಕೆಟ್ ರಾಜಕೀಯವಾಗಿದೆ. ಯಾರು ಯಾರಿಗೆ ಯಾವ ಬಕೆಟ್ ಹಿಡಿತಾ ಇದ್ದಾರೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದು, ಸದನದ ಒಳಗೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕು. ಅಧಿವೇಶನ ನಡೆಸುತ್ತಿರುವುದು ಯಾಕೆ..? ಬಾವಿಗಿಳಿದು ಪ್ರತಿಭಟನೆ ನಡೆಸಿದರೆ..? ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿ ಅಂತ ಒತ್ತಾಯಿಸಬೇಕು. ಅದನ್ನು ಬಿಟ್ಟು ಪಬ್ಲಿಸಿಟಿಗೆ ಈ ರೀತಿ ಎಲ್ಲಾ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

Tags :
Advertisement