ಪ್ರಜ್ವಲ್ ರೇವಣ್ಣ ಓಡಿ ಹೋಗಲು ಬಿಜೆಪಿ ಸಹಾಯ ಮಾಡಿದೆ : ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಆರೋಪ
ಬೆಂಗಳೂರು: ದೇಶ ಬಿಟ್ಟು ಸಂಸದ ಪ್ರಜ್ವಲ್ ಓಡಿ ಹೋಗಿದ್ದಾರೆ. ಓಡಿ ಹೋಗಲು ಕೇಂದ್ರ ಸರ್ಕಾರ ಸಹಾಯ ಮಾಡಿದೆ. ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡಬೇಕಿತ್ತು. ಪ್ರಜ್ವಲ್ ಮೇಲೆ ಒಂದು ತಿಂಗಳ ಹಿಂದೆ ಆರೋಪ ಇತ್ತು. ಎಲ್ಲವೂ ಗೊತ್ತಿದ್ದು ಓಡಿ ಹೋಗಲು ಬಿಜೆಪಿ ಸಹಾಯ ಮಾಡಿದೆ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಆರೋಪಿಸಿದ್ದಾರೆ.
ಪ್ರಜ್ವಲ್ ರೇವಣ್ಣರನ್ನು ವಿದೇಶದಿಂದ ಕರೆತರಬೇಕು ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಒತ್ತಾಯಿದ್ದಾರೆ. ಅಪರಾಧಿ ಜರ್ಮನಿಗೆ ಹೋಗಿದ್ದಾನೆ. ಕೇಂದ್ರ ಕೂಡಲೇ ಮಧ್ಯಪ್ರವೇಶಿಸಬೇಕು. ವಿದೇಶಾಂಗ ಸಚಿವರ ಮೂಲಕ ಗಮನಕ್ಕೆ ತರಬೇಕು. ಜರ್ಮನಿ ಸರ್ಕಾರದ ಜೊತೆ ಮಾತನಾಡಬೇಕು. ಆರೋಪಿಯನ್ನ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದಿದ್ದಾರೆ.
ನಾನು ಸಾವಿರಾರು ಮಹಿಳೆಯರ ಜೊತೆ ಮಾತನಾಡಿದೆ. ದೇಶ್ಯಾದ್ಯಂತ ನಾನು ಮಹಿಳೆಯರ ಜೊತೆ ಮಾತನಾಡಿದ್ದೇನೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರುದಿದ್ದಾರೆ. ಮೋದಿ ಕುಟುಂಬ ರಾಜಕೀಯ ಮತ್ತು ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಾರೆ. ಆದ್ರೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿದವರು ಮೋದಿ ಕುಟುಂಬದಲ್ಲಿ ಇದ್ದಾರೆ. ಸಂಸದ ಬ್ರಿಜ್ ಭೂಷನ್, ಸಂದೀಪ್ ಸಿಂಗ್ ಸೇರಿದಂತೆ ದೌರ್ಜನ್ಯ ಮಾಡಿದವರಿದ್ದಾರೆ.
ಬೇಟಿ ಬಚಾವ್, ಬೇಟಿ ಪಡಾವ್ ಅಂತ ಘೋಷಣೆ ಕೂಗುತ್ತಾರೆ. ಸಂಸದ ಪ್ರಜ್ವಲ್ ರೇವಣ್ಣ ದೌರ್ಜನ್ಯದ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿದೆ. ಪ್ರಧಾನಿಯನ್ನ ಜೆಡಿಎಸ್ ಪರಿವಾರ ಭೇಟಿ ಮಾಡುತ್ತೆ. ಮಾಜಿ ಸಿಎಂ,ಮಾಜಿ ಸಚಿವರ ಪರಿವಾರ ಭೇಟಿ ಮಾಡುತ್ತೆ. ಪ್ರಜ್ವಲ್ ರೇವಣ್ಣ ಕೂಡ ಇರ್ತಾರೆ. ಇದು ಮೋದಿ ಪರಿವಾರ. ಸಾವಿರಾರು ಮಹಿಳೆಯರ ಮೇಲೆ ಕೃತ್ಯ ನಡೆದಿದೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.