For the best experience, open
https://m.suddione.com
on your mobile browser.
Advertisement

ಬಿಜೆಪಿ 2ನೇ ಪಟ್ಟಿ ಬಿಡುಗಡೆ : ಘಟಾನುಘಟಿಗಳಿಗೆ ಟಿಕೆಟ್ ಮಿಸ್..!

07:53 PM Mar 13, 2024 IST | suddionenews
ಬಿಜೆಪಿ 2ನೇ ಪಟ್ಟಿ ಬಿಡುಗಡೆ   ಘಟಾನುಘಟಿಗಳಿಗೆ ಟಿಕೆಟ್ ಮಿಸ್
Advertisement

ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಇನ್ನೇನು ಕೆಪವೇ ದಿನಗಳಲ್ಲಿ ಅನೌನ್ಸ್ ಆಗಲಿದೆ. ಅಷ್ಟರ ಒಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ರಿಲೀಸ್ ಮಾಡಬೇಕಿದೆ. ಟಿಕೆಟ್ ಗಾಗಿಯೇ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಬಿಜೆಪಿಯಿಂದ ಮೊದಲ ಪಟ್ಟಿ ರಿಲೀಸ್ ಆಗಿದ್ದು, ಇದೀಗ ಇಂದು ಎರಡನೇ ಪಟ್ಟಿ ರಿಲೀಸ್ ಆಗಿದೆ. ಎರಡನೇ ಪಟ್ಟಿಯಲ್ಲಿ ಘಾಟಾನುಘಟಿ ನಾಯಕರಿಗೆ ಟಿಕೆಟ್ ಮಿಸ್ ಆಗಿದೆ.

Advertisement

ಬಿಜೆಪಿಯಿಂದ ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಮಾಡಿದೆ. ಅದರಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಇನ್ನು ಮಂಡ್ಯ, ಹಾಸನ, ಕೋಲಾರವನ್ನು ಬಿಜೆಪಿ, ಜೆಡಿಎಸ್ ಗೆ ಬಿಟ್ಟುಕೊಡುವ ಎಲ್ಲಾ ಸಾಧ್ಯತೆಗಳು ಇದೆ. ಹೀಗಾಗಿ ಇನ್ನುಳಿದಂತೆ ಚಿತ್ರದುರ್ಗ, ಬೆಳಗಾವಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಬಾಕಿ ಉಳಿಸಿದೆ.

Advertisement

ಸದ್ಯಕ್ಕೆ ಕೆಳಗೆ ಸೂಚಿಸಿರುವ ನಾಯಕರಿಗೆ ಟಿಕೆಟ್ ಮಿಸ್ ಆಗಿದೆ.

ಮೈಸೂರು – ಪ್ರತಾಪ ಸಿಂಹ
ಬೆಂಗಳೂರು ಉತ್ತರ – ಡಿ.ವಿ ಸದಾನಂದಗೌಡ
ಉತ್ತರ ಕನ್ನಡ – ನಳೀನ್ ಕುಮಾರ್ ಕಟೀಲ್
ಕೊಪ್ಪಳ – ಸಂಗಣ್ಣ ಕರಡಿ
ತುಮಕೂರು – ಜಿ.ಎಸ್‌ ಬಸವರಾಜ್
ಚಾಮರಾಜನಗರ – ವಿ. ಶ್ರೀನಿವಾಸ ಪ್ರಸಾದ್ ಟಿಕೆಟ್ ತಪ್ಪಿದೆ.

ಮೈಸೂರು- ಯದುವೀರ್ ಕೃಷ್ಣದತ್ತ್ ಒಡೆಯರ್

ಬ್ರಿಜೇಶ್ ಚೌಟಾ - ಉತ್ತರ ಕನ್ನಡ

ಡಾ.ಬಸವರಾಜ್ - ಕೊಪ್ಪಳ

ತುಮಕೂರು - ವಿ ಸೋಮಣ್ಣ

ಚಾಮರಾಜನಗರ - ಎಸ್ ಬಾಲರಾಜು ಅವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ಚಿಕ್ಕೋಡಿಗೆ ಅಣ್ಣ ಸಾಹೇಬ್ ಶಂಕರ್, ಬಾಗಲಕೋಟೆ - ಪಿಸಿ ಗಡ್ಡಿಗೌಡರ್, ಕಲಬುರ್ಗಿ ಉಮೇಶ್ ಜಾದವ್, ಬೀದರ್ - ಭಗವಂತ ಖೂಬಾ, ಬಳ್ಳಾರಿ - ಶ್ರೀರಾಮುಲು, ಹಾವೇರಿ - ಬಸವರಾಜ್ ಬೊಮ್ಮಾಯಿ, ಧಾರವಾಡ - ಪ್ರಹ್ಲಾದ್ ಜೋಶಿ, ದಾವಣಗೆರೆ - ಗಾಯತ್ರಿ ಸಿದ್ದೇಶ್ವರ್, ಶಿವಮೊಗ್ಗ - ಬಿ ವೈ ರಾಘವೇಂದ್ರ, ಉಡುಪಿ - ಚಿಕ್ಕಮಗಳೂರು - ಕೋಟಾ ಶ್ರೀನಿವಾಸ ಪೂಜಾರಿ, ಬೆಂಗಳೂರು ಗ್ರಾಮಾಂತರ - ಡಾ. ಸಿ ಎನ್ ಮಂಜುನಾಥ್, ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್ - ಪಿಸಿ ಮೋಹನ್ ಗೆ ಟಿಕೆಟ್ ನೀಡಲಾಗಿದೆ.

Tags :
Advertisement