Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂಭ್ರಮ : ಅವರ ಬಗ್ಗೆ ನಿಮಗೆಷ್ಟು ಗೊತ್ತು..?

11:47 AM Sep 17, 2024 IST | suddionenews
Advertisement

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂಭ್ರಮ. ದೇಶದೆಲ್ಲೆಡೆ ಅವರ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಬೇರೆ ಬೇರೆ ದೇಶದ ಪ್ರಧಾನಿಗಳು, ಸ್ನೇಹಿತರು, ಆತ್ಮೀಯರು, ರಾಜಕಾರಣಿಗಳು ಇಂದು ಮೋದಿಯವರಿಗೆ ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ. ಮೋದಿ ಅವರು 74ನೇ ವಸಂತಕ್ಕೆ‌ ಪದಾರ್ಪಣೆ ಮಾಡಿದ್ದಾರೆ.

Advertisement

 

ನರೇಂದ್ರ ಮೋದಿಯವರು ಬಾಲ್ಯದಿಂದಾನು ದೇಶ ಸೇವೆ ಹಾಗೂ ದೇಶಭಕ್ತಿಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲಿಯೇ RSS ಸಂಘಕ್ಕೂ ಸೇರಿದ್ದರು. ಅಲ್ಲಿಂದಾನೇ ಶಿಸ್ತು ಮತ್ತು ಸಂಘಟನೆಯಲ್ಲಿ ತರಬೇತಿ ಪಡೆದರು. 2001ರಲ್ಲಿ ಮೋದಿಯವರ ರಾಜಕೀಯ ರಥಯಾತ್ರೆ ಆರಂಭವಾಯಿತು. ಮೊದಲಿಗೆ ಗುಜರಾತ್ನ ಮುಖ್ಯಮಂತ್ರಿಯಾದರು. ನಂತರ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಮುನ್ನಡೆಸಿದರು. ಈ ಮೂಲಕ ಬಿಜೆಪಿಯಲ್ಲಿದ್ದುಕೊಂಡು ನಾಲ್ಕು ಬಾರಿ ಸಿಎಂ ಹಾಗೂ ಮೂರು ಬಾರಿ ಪಿಎಂ ಆಗಿರುವ ಹೆಗ್ಗಳಿಕೆ ಇವರದ್ದು.

Advertisement

2001ರಲ್ಲಿ ಮೊದಲ ಬಾರಿಗೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾದರು‌. ಅದು ಕೇಶುಭಾಯಿ ಪಟೇಲ್ ರಾಜೀನಾಮೆ ನೀಡಿದ್ದ ಕಾರಣಕ್ಕೆ ಆ ಸಮಯದಲ್ಲಿ ಚುನಾವಣೆ ನಡೆದಿತ್ತು. ಮೋದಿಯವರು ಮುಖ್ಯಮಂತ್ರಿಯಾದರು. ಇನ್ನು ಎರಡನೇ ಬಾರಿಗೆ ಮೋದಿ ಅವರು 2002ರಲ್ಲಿ ಗುಜರಾತ್ ಅಸೆಂಬ್ಲಿಯನ್ನು ವಿಸರ್ಜಿಸಿದರು. ಡಿಸೆಂಬರ್ 2002ರಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ ಗೆಲುವು ಖಂಡಿತ್ತು. ಅಂದು ಮತ್ತೆ ಐದು ವರ್ಷ ಸಿಎಂ ಆಗಿ ಆಳ್ವಿಕೆ ನಡೆಸಿದರು. 2007ರಲ್ಲಿ ಮತ್ತೆ ಮಣಿಗರದಿಂದಾನೇ ಸ್ಪರ್ಧಿಸಿದ್ದ ಮೋದಿ ಅವರಿಗೆ ಗೆಲುವು ಮತ್ತೆ ಸಿಕ್ಕಿತ್ತು. ಮೂರನೇ ಬಾರಿಗೆ ಸಿಎಂ ಆದರು. 2012ರಲ್ಲಿಯೂ ಮಣಿನಗರದಿಂದ ಗೆದ್ದು ಸಿಎಂ ಆಗಿದ್ದರು. ಹಾಗೇ 2014 ಹಾಗೂ 2019 ಪ್ರಧಾನಿಯಾಗಿದ್ದ ಮೋದಿ ಅವರು ಪ್ರಸ್ತುತ ಅವರೇ ಪ್ರಧಾನಿಯಾಗಿ ಹ್ಯಾಟ್ರಿಕ್ ಗೆಲುವು ಬಾರಿಸಿದ್ದಾರೆ.

Advertisement
Tags :
bengalurubirthday celebrationchitradurgaNarendra modinew Delhiprime minister modisuddionesuddione newsಚಿತ್ರದುರ್ಗನವದೆಹಲಿಪ್ರಧಾನಿ ಮೋದಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹುಟ್ಟುಹಬ್ಬದ ಸಂಭ್ರಮ
Advertisement
Next Article