For the best experience, open
https://m.suddione.com
on your mobile browser.
Advertisement

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ 50 ಲಕ್ಷದಲ್ಲಿ ಸಿಗೋದು ಎಷ್ಟು ಲಕ್ಷ ಗೊತ್ತಾ..?

11:23 AM Jan 29, 2024 IST | suddionenews
ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ 50 ಲಕ್ಷದಲ್ಲಿ ಸಿಗೋದು ಎಷ್ಟು ಲಕ್ಷ ಗೊತ್ತಾ
Advertisement

ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರ ಹೊಮ್ಮಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಹೊರ ಬಂದಿದ್ದಾರೆ. ಐದು ಜನ ರನ್ನರ್ ಅಪ್ ಹಾಗೂ ವಿನ್ನರ್ ಆದವರಿಗೆ ಬಾರೀ ಮೊತ್ತದ ಹಣವೇ ಕೈಗೆ ಸಿಗುತ್ತಿದೆ. ಅದರಲ್ಲಿ ಐದು ಹಾಗೂ ನಾಲ್ಕನೆ ರನ್ನರ್ ಅಪ್ ಆದ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರಿಗೆ ತಲಾ ಎರಡು ಲಕ್ಷ ಹಣ ಸಿಗಲಿದೆ. ಮೂರನೇ ರನ್ನರ್ ಅಪ್ ಆದ ವಿನಯ್ ಗೆ ಐದು ಲಕ್ಷ, ಎರಡನೇ ರನ್ನರ್ ಅಪ್ ಆದ ಸಂಗೀತಾಗೆ ಏಳು ಲಕ್ಷ ಹಾಗೇ ಮೊದಲ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್ ಗೆ 10 ಲಕ್ಷ ಸಿಗಲಿದೆ. ಇದರ ಜೊತೆಗೆ ವಿನ್ನರ್ ಆದ ಕಾರ್ತಿಕ್ ಗೆ 50 ಲಕ್ಷ ಸಿಗಲಿದೆ.

Advertisement
Advertisement

ಇಷ್ಟೆಲ್ಲ ಹಣ ಪಡೆದವರಿಗೆ ಪೂರ್ತಿಯಾಗಿ ಕೈಗೆ ಬರಲಿದೆಯಾ ಎಂದರೆ ಇಲ್ಲ. ಕರ್ನಾಟಕ ಸರ್ಕಾರದ ಟ್ಯಾಕ್ಸ್ ಕಡಿತಗೊಂಡು ಬಳಿಕ ಹಣ ಸಿಗಲಿದೆ. ಕಾರ್ತಿಕ್ ಮಹೇಶ್ ವಿನ್ನರ್ ಆಗುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಆದರೆ ಸ್ಟ್ರಾಂಗ್ ಕಂಟೆಸ್ಟೆಂಟ್ ಅನ್ನೋದು ಎಲ್ಲರಿಗೂ ಗೊತ್ತಿತ್ತು. ರನ್ನರ್ ಅಪ್ ಆದರೂ ಆಗಬಹುದು. ಅಥವಾ ಮೊದಲೆ ಹೊರಗೆ ಬರಬಹುದು ಎಂಬ ಊಹೆ ಇತ್ತು. ಅದೆಲ್ಲವನ್ನು ಮೀರಿ ಕಾರ್ತಿಕ್ ವಿನ್ ಆಗಿದ್ದಾರೆ.

Advertisement
Advertisement

ಕಾರ್ತಿಕ್ ವಿನ್ನರ್ ಆಗಿ ಪಡೆದ 50 ಲಕ್ಷ ಹಣದಲ್ಲಿ ಸಿಗುವುದು ಕೇವಲ 34 ಲಕ್ಷದ 40 ಸಾವಿರ. ಇನ್ನುಳಿದ 14.60 ಲಕ್ಷ ಸರ್ಕಾರದ ಟ್ಯಾಕ್ಟ್ ಅಮೌಂಟ್ ಎಂದು ಕಟ್ಟಲಾಗುತ್ತದೆ. ಇದರ ಜೊತೆಗೆ ಕಾರ್ತಿಕ್ ಗೆ ಮಾರುತಿ ಸುಜುಕಿ ಕಾರು, ಬೌನ್ಸ್ ಕಡೆಯಿಂದ ಬೈಕ್ ಕೂಡ ಗಿಫ್ಟ್ ಆಗಿ ಸಿಕ್ಕಿದೆ.

Advertisement
Tags :
Advertisement