Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮದುವೆಯಾದ ಬಿಗ್ ಬಾಸ್ ಸಿರಿ : 'ಬದುಕು' ಧಾರಾವಾಹಿಯಲ್ಲಿ ನಟಿಸಿದ್ದ ನಟನನ್ನೇ ಮದುವೆಯಾದ ನಟಿ

04:28 PM Jun 14, 2024 IST | suddionenews
Advertisement

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಬಂದಿದ್ದ ಸಿರಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ತಮ್ಮದೇ ಸೀರಿಯಲ್ ನಲ್ಲಿ ನಟಿಸಿದ್ದ ನಟನನ್ನು ವರಿಸಿದ್ದಾರೆ. ನಂದಿಬೆಟ್ಟದ ತಪ್ಪಲಿನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕುಟುಂಬಸ್ಥರು, ಆಪ್ತರಷ್ಟೇ ಈ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Advertisement

ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ಸಿರಿಗೆ ಮದುವೆ ವಿಚಾರ ಎದುರಾಗಿತ್ತು. ಅತಿಥಿಯಾಗಿ ತಾರಾ ಹೋಗಿದ್ದಾಗ ಮದುವೆ ಬಗ್ಗೆ ಅಭಿಪ್ರಾಯ ಕೇಳಿದ್ದರು. ಆಗಬಾರದು ಅಂತ ಏನಿಲ್ಲ, ಪರ್ಫೆಕ್ಟ್ ಆಗಿರುವ ಪಾಟ್ನರ್ ಬೇಕು. ನಾನಂತು ನನ್ನ ವೃತ್ತಿ ಬಿಡುವುದಿಲ್ಲ. ಅದಕ್ಕೆ ಬೆಂಬಲವಾಗಿ ನಿಲ್ಲುವಂತ ಹುಡುಗ ಬೇಕು ಎಂದಿದ್ದರು. ಆದಷ್ಟು ಬೇಗ ಆ ರೀತಿಯ ಹುಡುಗ ಸಿಗಲಿ, ಮದುವೆಯಾಗಲಿ ಎಂದೇ ಎಲ್ಲರೂ ಹಾರೈಸಿದ್ದರು. ಎಲ್ಲರ ಹಾರೈಕೆ ಫಲಿಸಿದೆ, ಸರಳವಾಗಿ ವೈವಾಹಿಕ ಜೀವನಕ್ಕೆ ಸಿರಿ ಕಾಲಿಟ್ಟಿದ್ದಾರೆ.

ಪ್ರಭಾಕರ್ ಬೋರೇಗೌಡ ಎಂಬುವವರನ್ನು ಸಿರಿ ಮದುವೆಯಾಗಿದ್ದಾರೆ. ಇವರು ನಟ ಮತ್ತು ಉದ್ಯಮಿಯಾಗಿದ್ದಾರೆ. ಮೂಲತಃ ಮಂಡ್ಯ ಮೂಲದವರಾಗಿದ್ದು, ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ನಿನ್ನೆ ಬೆಳಗ್ಗೆ ನಂದಿ ಬೆಟ್ಟದ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು.

Advertisement

ಕೆಲವೊಮಂದು ಮೂಲಗಳ ಪ್ರಕಾರ ಪ್ರಭಾಕರ್ ಈ ಹಿಂದೆ ಬದುಕು ಧಾರಾವಾಹಿಯಲ್ಲಿ ಜೊತೆಗೆ ಕೆಲಸ ಮಾಡಿದ್ದರು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಿರಿ ಹೊಸ ಬದುಕಿಗೆ ಕಾಲಿಟ್ಟಿದ್ದು, ಅಭಿಮಾನಿಗಳಿಗೆ ಸಂತಸ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿಗಳು ನೆಚ್ಚಿನ ನಟಿಯ ಮದುವೆಗೆ ಶುಭಕೋರುತ್ತಿದ್ದಾರೆ. ಸಾಂಸಾರಿಕ ಜೀವನ ಸುಖವಾಗಿರಲೆಂದು ಹಾರೈಸುತ್ತಿದ್ದಾರೆ.

Advertisement
Tags :
bengalurubigg bossBigg Boss contestantchitradurgasuddionesuddione newsಚಿತ್ರದುರ್ಗಬದುಕು ಧಾರಾವಾಹಿಬಿಗ್ ಬಾಸ್ ಸಿರಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article