For the best experience, open
https://m.suddione.com
on your mobile browser.
Advertisement

ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆದೇ ಬಿಟ್ಟರು ನಮ್ರತಾ..!

10:54 PM Jan 12, 2024 IST | suddionenews
ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆದೇ ಬಿಟ್ಟರು ನಮ್ರತಾ
Advertisement

ಇವತ್ತು ಟಿಕೆಟ್ ಟು ಫಿನಾಲೆ ಟಾಸ್ಕ್ ಕಡೆಯ ದಿನವಾಗಿದೆ. ಕಡೆಯ ಟಾಸ್ಕ್ ನಲ್ಲಿ ತುಕಾಲಿಗೆ ಅವಕಾಶ ನೀಡಲಾಗಿತ್ತು. ಬಾಕ್ಸ್ ಗಳನ್ನು ಕಡ್ಡಿಯಲ್ಲಿ ಬ್ಯಾಲೆನ್ಸ್ ಮಾಡಿ, ಬಾಕ್ಸ್ ಒಳಗಿಂದ ತಂದು ಮೇಲೆ ನೇತಾಕಬೇಕಿತ್ತು. ಇದರಲ್ಲಿ ವಿನಯ್, ವರ್ತೂರು, ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು ತುಕಾಲಿ. ಆದರೆ ಪ್ರತಾಪ್ ಗೆ ವಿಶೇಷ ಅಧಿಕಾರ ಸಿಕ್ಕಾಗ ಸಂಗೀತಾ ಅವರನ್ನು ತೆಗೆದಿದ್ದರು. ಯಾಕಂದ್ರೆ ಅಂಕ ಹತ್ತಿರವಿದೆ. ಈ ಆಟದಲ್ಲಿ ಗೆದ್ದರೆ ಸಂಗೀತಾ ಮುಂದೆ ಬಿಡುತ್ತಾರೆ ಅಂತ.

Advertisement
Advertisement

Advertisement

ಟಾಸ್ಕ್ ಶುರು ಮಾಡುವುದಕ್ಕೂ ಮುನ್ನ ಬಿಗ್ ಬಾಸ್ ಉಳಿದ ಸದಸ್ಯರಿಗೆ ಒಂದು ಅವಕಾಶ ನೀಡಿತ್ತು. ಗೆಲ್ಲುವ ಸದಸ್ಯನನ್ನು ಗುರುತಿಸಿದರೆ ಅವರಿಗೆ 40 ಮಾರ್ಕ್ಸ್ ಸಿಗುತ್ತದೆ ಎಂದು ಘೋಷಣೆ ಮಾಡಿತ್ತು. ಅದರಂತೆ ತನಿಷಾ, ಕಾರ್ತಿಕ್, ನಮ್ರತಾ ವಿನಯ್, ಸಂಗೀತಾ ಹೆಸರನ್ನು ಗುರುತಿಸಿದ್ದರು. ಆದರೆ ಸಂಗೀತಾ ಅವರು ಪ್ರತಾಪ್ ಹೆಸರನ್ನೇ ಬರೆದಿದ್ದರು. ಹೀಗಾಗಿ 40 ಅಂಕಗಳು ಸಿಕ್ಕಿದೆ.

Advertisement

ಫಿನಾಲೆ ಟು ಟಾಸ್ಕ್ ನಲ್ಲಿ ತುಕಾಲಿ 140, ತನಿಷಾ- 140, ಕಾರ್ತಿಕ್ - 170, ವಿನಯ್ - 180, ಸಂತೋಷ್ - 200, ನಮ್ರತಾ - 210, ಸಂಗೀತಾ - 300, ಪ್ರತಾಪ್ - 420 ಅಂಕಗಳು ಬಂದಿದೆ. ಈ ಅಂಕಗಳ ಆಧಾರದ ಮೇಲೆ ಮೂರು ಜನರನ್ನು ಬಿಗ್ ಬಾಸ್ ಆಯ್ಕೆ ಮಾಡಿದೆ. ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಮುಂದಿನ ವಾರದ ಎಲಿಮಿನೇಷನ್ ನಿಂದ ಕೂಡ ಪಾರಾಗುತ್ತಾರೆ. ಇನ್ನೊಂದು ವಾರ ಕಳೆದರೆ ಫಿನಾಲೆಗೆ ಕಾಲಿಡಲಿದ್ದಾರೆ. ಟಿಕೆಟ್ ಟು ಫಿನಾಲೆಯಲ್ಲಿ ಸಂಗೀತಾ, ಪ್ರತಾಪ್ ಜೊತೆಗೆ ನಮ್ರತಾ ಕೂಡ ಟಿಕೆಟ್ ಪಡೆದಿದ್ದಾರೆ. ಇದು ನಮ್ರತಾಗೆನೇ ನಂಬುವುದಕ್ಕೆ ಆಗಲಿಲ್ಲ. ಮನೆಯಲ್ಲಿ ಉಳಿದವರೆಲ್ಲಾ ಶುಭ ಕೋರಿದ್ದಾರೆ.

Advertisement
Tags :
Advertisement