For the best experience, open
https://m.suddione.com
on your mobile browser.
Advertisement

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು : ಮೈತ್ರಿಗೆ ಸೋಲು..!

09:05 PM Feb 27, 2024 IST | suddionenews
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು   ಮೈತ್ರಿಗೆ ಸೋಲು
Advertisement

Advertisement

ಬೆಂಗಳೂರು: ಇಂದು ರಾಜ್ಯಸಭಾ ಚುನಾವಣೆ ನಡೆದಿದ್ರಿ, ಫಲಿತಾಂಶವೂ ಹೊರ ಬಿದ್ದಿದೆ. ಇಂದಿನ ಚುನಾವಣೆ ಕುತೂಹಲದತ್ತ ಸಾಗಿತ್ತು. ಜೆಡಿಎಸ್ ನಿಂದ ಐದನೇ ಅಭ್ಯರ್ಥಿ ಸ್ಪರ್ಧಿಸಿದ್ದ ಕಾರಣ ಒಂದಿಷ್ಟು ಆತಂಕವೂ ಕಾಂಗ್ರೆಸ್ ಗೆ ಶುರುವಾಗಿತ್ತು. ಆದರೆ ಈ ಎಲ್ಲದರ ನಡುವೆ ಆಡತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ಮೂವರು ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಂತ ಅಜಯ್ ಮಾಕನ್ -48, ನಾಸೀರ್ ಹುಸೇನ್ - 46, ಜಿ ಸಿ ಚಂದ್ರಶೇಖರ್ - 46 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇನ್ನು ಮೈತ್ರಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ನಾರಾಯಣ ಸಾ ಬಾಂಢಾಗೆ 47 ಮತ, ಕುಪೇಂದ್ರ ರೆಡ್ಡಿಗೆ 36 ಮತಗಳು ಸಿಕ್ಕಿವೆ. 47 ಮತ ಪಡೆದ ನಾರಾಯಣ ಬಾಂಢಾ ರಾಜ್ಯಸಭೆಗೆ ಮೊದಲ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದರೆ, ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಈ ಗೆಲುವನ್ನು ಕಾಂಗ್ರೆಸ್ ಸಂಭ್ರಮಿಸಿದೆ. ಸಿಹಿ ತಿನ್ನಿಸಿ, ಗೆದ್ದವರಿಗೆ ಹಾರ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ. ಗೆದ್ದವರ ಪರ ಘೋಷಣೆಗಳು ಕೇಳಿ ಬಂದಿವೆ. ಈ ಬಾರಿ ಕಾಂಗ್ರೆಸ್ ವಿರುದ್ಧ ಗೆಲ್ಲಲರೆಬೇಕೆಂದು ಸ್ಟಾಟರ್ಜಿ ರೂಪಿಸಿದ್ದ ಜೆಡಿಎಸ್ ಲೆಕ್ಕಚಾರ ಉಲ್ಟಾ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಿಕ್ಕಿದೆ. ವಿಧಾನಸಭಾ ಹಾಗೂ ರಾಜ್ಯಸಭೆಯಲ್ಲಿ ಗೆಲುವು ಪಡೆದು ಸಂತಸದಲ್ಲಿರುವ ಕಾಂಗ್ರೆಸ್ ಈಗ ಲೋಕಸಭೆಗೆ ತಯಾರಿ ನಡೆಸಬೇಕಿದೆ. ಅಲ್ಲಿಯೂ ಗೆಲ್ಲುವ ತಂತ್ರಗಾರಿಕೆ ಬಳಕೆ ಮಾಡುತ್ತಾ ನೋಡಬೇಕಿದೆ.

Tags :
Advertisement