For the best experience, open
https://m.suddione.com
on your mobile browser.
Advertisement

ಡಿಕೆ ಬ್ರದರ್ಸ್ ಗೆ ಬಿಗ್ ಶಾಕ್ : ಸೋತ ಬಳಿಕ ಡಿಕೆ ಸುರೇಶ್ ಹೇಳಿದ್ದೇನು..?

03:16 PM Jun 04, 2024 IST | suddionenews
ಡಿಕೆ ಬ್ರದರ್ಸ್ ಗೆ ಬಿಗ್ ಶಾಕ್   ಸೋತ ಬಳಿಕ ಡಿಕೆ ಸುರೇಶ್ ಹೇಳಿದ್ದೇನು
Advertisement

Advertisement
Advertisement

ಇಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೆ ಎಲ್ಲರ ಗಮನ ಇತ್ತು. ಫಸ್ಟ್ ಟೈಮ್ ಡಾ.ಮಂಜುನಾಥ್ ಅವರು ಸ್ಪರ್ಧೆಗೆ ನಿಂತಿದ್ದರು. ಸಂಸದ ಸ್ಥಾನಕ್ಕೆ ಎಲ್ಲರ ಬಲವಂತದಿಂದ ಸ್ಪರ್ಧೆ ಮಾಡಿಯೇ ಬಿಟ್ಟಿದ್ದರು. ಆದರೆ ಡಿಕೆ ಸುರೇಶ್ ಮುಂದೆ ನಿಜಕ್ಕೂ ಗೆಲ್ಲುತ್ತಾರಾ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಡಾ.ಮಂಜುನಾಥ್ ಅವರ ಗುಣ ಎಲ್ಲರಿಗೂ ಗೊತ್ತಿದ್ದ ಕಾರಣಕ್ಕೆ, ಅದೆಷ್ಟೋ ಜೀವಗಳನ್ನ ಉಳಿಸಿದ ಗುಣಕ್ಕೆ ಜನ ಜೈಕಾರ ಹಾಕಿದ್ದಾರೆ. ಇಂದು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಮತ ಎಣಿಕೆ ಮುಗಿದ ಬಳಿಕ ಮಾತನಾಡಿದ ಡಿಕೆ ಸುರೇಶ್, ಈ ಚುನಾವಣೆಗಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳು. ಮುಖಂಡರಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ನು ಎರಡು ಬಾರಿ ಸಂಸದರನ್ನಾಗಿ ಮಾಡಿದ ಜನತೆಗೂ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲ ಚುನಾವಣೆಯಲ್ಲಿ ಗೆದ್ದಂತ ಡಾ.ಮಂಜುನಾಥ್ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.

Advertisement
Advertisement

ಈ ಫಲಿತಾಂಶ ಡಿಕೆ ಬ್ರದರ್ಸ್ ಗೆ ಬಿಗ್ ಶಾಕ್ ಅನ್ನೇ ನೀಡಿದೆ. ಬೆಂಗಳೂರು ಗ್ರಾಮಾಂತರದ ಜನ ಯಾವತ್ತಿಗೂ ಕೈಬಿಡುವುದಿಲ್ಲ. ಜನರ ನಾಯಕನಾಗಿ ಸುರೇಶ್ ಕೆಲಸ ಮಾಡಿದ್ದಾರೆ. ಹೀಗಾಗಿ ಜನ ಸುರೇಶ್ ಅವರನ್ನು ಗೆಲ್ಲಿಸುತ್ತಾರೆ ಎಂದೇ ಡಿಕೆ ಶಿವಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಡಿಕೆ ಸುರೇಶ್ ಅವರನ್ನು ಡಾ.ಮಂಜುನಾಥ್ ಎರೆಉ ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜನತೆಯೂ ಬದಲಾವಣೆಯನ್ನು ಬಯಸುತ್ತಿದ್ದರು ಎನಿಸುತ್ತದೆ. ಇದೀಗ ಡಾ.ಮಂಜುನಾಥ್ ಅವರಿಗೆ ಮತ ನೀಡಿ ಗೆಲ್ಲಿಸಿದ್ದಾರೆ.

Advertisement

Advertisement
Tags :
Advertisement